ನವದೆಹಲಿ: ಅಭ್ಯರ್ಥಿ ಬದಲು ಬೇರೆಯವರು ಪರೀಕ್ಷೆ ಬರೆಯುವುದು ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳನ್ನು ತಡೆಯಲು ಪರೀಕ್ಷೆಗಳಲ್ಲಿ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಅಳವಡಿಸಲು ಯೋಜಿಸಿರುವುದಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಶನಿವಾರ ಹೇಳಿದೆ.

ದೇಶಾದ್ಯಂತ ಅಂದಾಜು 1,500 ಪರೀಕ್ಷಾ ಕೇಂದ್ರಗಳು ಮತ್ತು 17 ಲಕ್ಷ ವಿದ್ಯಾರ್ಥಿಗಳಿಗೆ ಇದು ಅನ್ವಯಿಸಲಿದೆ. ದೇಶಾದ್ಯಂತ ಆಫ್ಲೈನ್/ಆನ್ಲೈನ್ ವಿಧಾನಗಳಲ್ಲಿ ವಿವಿಧ ಪರೀಕ್ಷೆಗಳನ್ನು ಸಿಬಿಎಸ್ಇ ನಡೆಸುತ್ತದೆ. ಆಯ್ದ ನಗರಗಳಲ್ಲಿ ಪರೀಕ್ಷೆ ಸಂದರ್ಭದಲ್ಲಿ ಮತ್ತು ಪರೀಕ್ಷೆಯ ನಂತರದಲ್ಲಿ ಡಿಜಿಟಲ್ ಫಿಂಗರ್ಪ್ರಿಂಟ್ ಕ್ಯಾಪ್ಚರಿಂಗ್, ಫೋಟೋ ಕ್ಯಾಪ್ಚರಿಂಗ್, ಅಭ್ಯರ್ಥಿಗಳ ಸ್ಕಾಯನ್ ಮಾಡಿದ ಫೋಟೋಗಳೊಂದಿಗೆ ಮುಖ ಹೊಂದಾಣಿಕೆ ಮೊದಲಾದ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಕಲ್ಪಿಸಲಾಗುವುದು ಎಂದು ಸಿಬಿಎಸ್ಇ ಹೇಳಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ವಿವಿಧ ಚಟುವಟಿಕೆಗಳನ್ನು ಮೇಲ್ವಿಚಾರಣೆ ಹಾಗೂ ನೈಜ ಸಮಯದ ಆಧಾರದಲ್ಲಿ ಪರಿಶೀಲಿಸುವ ಕಾರ್ಯ ನಡೆಯಲಿದೆ. ಈ ಮೂಲಕ ಪರೀಕ್ಷಾ ಪ್ರಕ್ರಿಯೆ ಸುಧಾರಿಸಲಾಗುವುದು. ಇದಕ್ಕಾಗಿ ಅಂದಾಜು 5 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ಸಿಬಿಎಸ್ಇ ಹೇಳಿದೆ.