ಪೆರ್ಲ: ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗಕ್ಕೆ ಕುಡಿನೀರ ಶುದ್ಧಿಕರಣ ಯಂತ್ರವನ್ನು ಹಳೆ ವಿದ್ಯಾರ್ಥಿಯೋರ್ವರು ಕೊಡುಗೆಯಾಗಿ ನೀಡಿದರು.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸದಾನಂದ ಶೆಟ್ಟಿ ಅಲ್ಚಾರ್ ತಮ್ಮ ತಂದೆಯವರಾದ ವಿಶ್ವನಾಥ ಶೆಟ್ಟಿ ಅವರ ಸ್ಮರಣಾರ್ಥ ಈ ಕೊಡುಗೆಯನ್ನು ಶಾಲೆಗೆ ಸಮರ್ಪಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಪ್ರಬಂಧಕ, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಯು.ಪಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ, ಶಾಲಾ ಪಿಟಿಎ ಅಧ್ಯಕ್ಷ ವಿಲ್ಸನ್ ಡಿ.ಸೋಜ, ಕೃಷ್ಣ ಪ್ರಸಾದ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಾನಿ ಸದಾನಂದ ಶೆಟ್ಟಿ ಅವರನ್ನು ಶಾಲಾ ವತಿಯಿಂದ ಅಭಿನಂದಿಸಲಾಯಿತು. ಶಾಲಾ ಶಿಕ್ಷಕ ಶ್ಯಾಮ್ ಪ್ರಸಾದ್ ಸ್ವಾಗತಿಸಿ, ಮೊಹಮ್ಮದ್ ಸಿ.ಎಚ್.ವಂದಿಸಿದರು. ದಿವ್ಯ ಎಂ ಕಾರ್ಯಕ್ರಮ ನಿರೂಪಿಸಿದರು.