ಕಾಸರಗೋಡು: ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪಿ ಬಿಜೋಯ್ ಅಧಿಕಾರ ವಹಿಸಿಕೊಂಡರು. ಹಾಲಿ ಎಸ್.ಪಿ ಡಾ. ವೈಭವ್ ಸಕ್ಸೇನಾ ನೂತನ ಎಸ್.ಪಿ ಬಿಜೋಯ್ ಅವರನ್ನು ಹೂಗುಚ್ಛ ನೀಡಿ ಬರಮಾಡಿಕೊಂಡರು.ಡಾ. ವೈಭವ್ ಸಕ್ಸೇನಾ ಅವರನ್ನು ಎರ್ನಾಕುಲಂ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
2009ರಲ್ಲಿ ಎಂಟು ತಿಂಗಳ ಕಾಲ ಕಾಸರಗೋಡು ಡಿವೈಎಸ್ಪಿಯಾಗಿ ಪಿ.ಬಿಜೋಯ್ ಕಾರ್ಯನಿರ್ವಹಿಸಿದ್ದರು. 1996ರಲ್ಲಿ ಪೆÇಲೀಸ್ ಪಡೆಗೆ ಸೇರ್ಪಡೆಗೊಂಡ ಅವರು ಮಂಜೇಶ್ವರ ಠಾಣೆ ಎಸ್‍ಐ ಆಗಿ ಸೇವೆ ಸಲ್ಲಿಸಿದ್ದರು. 2018 ರಲ್ಲಿ ರಾಷ್ಟ್ರಪತಿಗಳ ಪೆÇಲೀಸ್ ಪದಕಕ್ಕೆ ಭಾಜನರಾಗಿದ್ದರೆ, 2015ರಲ್ಲಿ ಮುಖ್ಯಮಂತ್ರಿಯ ಪೆÇಲೀಸ್ ಪದಕವನ್ನು ನೀಡಲಾಗಿತ್ತು. 2005 ರಲ್ಲಿ, ಅವರು ಕೊಸೊವೊದಲ್ಲಿ ನಿಯೋಜಿತ ವಿಶ್ವಸಂಸ್ಥೆಯ ಅಧಿಕಾರಿಯಾಗಿ, ಶಾಂತಿ ಪಾಲನಾ ಪಡೆಯ ಉಸ್ತುವಾರಿ ವಹಿಸಿಕೊಂಡಿದ್ದರು.
ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕಾಸರಗೋಡು ಡಿವೈಎಸ್ಪಿ ಪಿ.ಕೆ.ಸುಧಾಕರನ್, ಕಾಞಂಗಾಡ್ ಡಿವೈಎಸ್ಪಿ ಬಾಲಕೃಷ್ಣನ್ ನಾಯರ್, ಸ್ಪೆಶ್ಯಲ್ ಬ್ರಾಂಚ್ ಡಿವೈಎಸ್ಪಿ ಪಿ.ಪಿ ಮನೋಜ್, ವಿಶೇಷ ಸಂಚಾರಿ ದಳ (ಎಸ್.ಎಂ.ಎಸ್) ಡಿವೈಎಸ್ಪಿ ಸತೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.