ತಿರುವನಂತಪುರ: ನಬಾರ್ಡ್ ಕೇರಳ ಪ್ರಾದೇಶಿಕ ಕಚೇರಿಯು ವಿಜಿಲೆನ್ಸ್ ಜಾಗೃತಿ ಸಪ್ತಾಹದ ಅಂಗವಾಗಿ ಬ್ಯಾಂಕರ್‍ಗಳಿಗಾಗಿ ವಾಕಥಾನ್ ಅನ್ನು ಆಯೋಜಿಸಿದೆ.
ಭ್ರಷ್ಟಾಚಾರ ಬೇಡ ಎಂದು ಹೇಳಿ; ‘ರಾಷ್ಟ್ರಕ್ಕೆ ಬದ್ಧರಾಗಿ’ ವಿಷಯದಲ್ಲಿ ವಾಕಥಾನ್ ಆಯೋಗಿಸಲಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್‍ನ ಪ್ರಾದೇಶಿಕ ನಿರ್ದೇಶಕ ಥಾಮಸ್ ಮ್ಯಾಥ್ಯೂ ವಾಕಥಾನ್‍ಗೆ ಚಾಲನೆ ನೀಡಿದರು.
ಅಧಿಕೃತ ಜೀವನದಲ್ಲಿ ಭ್ರμÁ್ಟಚಾರ ರಹಿತವಾಗಿ ಕಾರ್ಯನಿರ್ವಹಿಸಬೇಕು ಎಂದು ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ. ಗೋಪ ಕುಮಾರನ್ ನಾಯರ್ ಹೇಳಿದರು.
ಇಂತಹ ಕಾರ್ಯಕ್ರಮಗಳಿಂದ ಸಾರ್ವಜನಿಕರಲ್ಲಿ ಬ್ಯಾಂಕ್ ಅಧಿಕಾರಿಗಳ ಮೇಲಿನ ವಿಶ್ವಾಸ ಹೆಚ್ಚುತ್ತದೆ ಹಾಗೂ ಭ್ರμÁ್ಟಚಾರದ ವಿರುದ್ಧ ಜಾಗೃತಿ ಮೂಡಿಸುತ್ತದೆ ಎಂದು ಎಸ್ ಎಲ್ ಬಿಸಿ ಸಂಚಾಲಕ ಹಾಗೂ ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಸ್.ಪ್ರೇಮಕುಮಾರ್ ಅಭಿಪ್ರಾಯಪಟ್ಟರು.
ನಬಾರ್ಡ್ ಕಚೇರಿ ಆವರಣದಿಂದ ಆರಂಭವಾದ ವಾಕಥಾನ್ ತಿರುವನಂತಪುರಂ ನಗರದ ಪ್ರಮುಖ ಸ್ಥಳಗಳಾದ ಬೇಕರಿ ಜಂಕ್ಷನ್, ಪಾಳಯಂ ಮತ್ತು ಎಜಿ ಕಚೇರಿಗೆ ಭೇಟಿ ನೀಡಿತು. 160ಕ್ಕೂ ಹೆಚ್ಚು ಬ್ಯಾಂಕ್ ಉದ್ಯೋಗಿಗಳು ವಾಕಥಾನ್ ನಲ್ಲಿ ಪಾಲ್ಗೊಂಡಿದ್ದರು.