HEALTH TIPS

ಮಂಜೇಶ್ವರ ತಾಲೂಕು ಆಸ್ಪತ್ರೆಯ ಅಭಿವೃದ್ಧಿಗೆ ತುರ್ತು ಮಹತ್ವ ನೀಡಬೇಕು: ಮುಸ್ಲಿಂ ಲೀಗ್

                ಉಪ್ಪಳ: ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯ ಅಭಿವೃದ್ಧಿಗೆ ಸರ್ಕಾರ ತುರ್ತು ಮಹತ್ವ ನೀಡಬೇಕು ಎಂದು ಉಪ್ಪಳ ಸಿ.ಎಚ್. ಕಟ್ಟಡದಲ್ಲಿ ಮಂಜೇಶ್ವರ ಕ್ಷೇತ್ರ ಮುಸ್ಲಿಂ ಲೀಗ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಗ್ರಹಿಸಲಾಯಿತು.

              ಆಸ್ಪತ್ರೆಯನ್ನು ಬುಡಮೇಲುಗೊಳಿಸಲು ಕೆಲವರು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ಭಾಗವಾಗಿ ರಾತ್ರಿ ವೇಳೆ ಚಿಕಿತ್ಸೆ ಹಾಗೂ ತುರ್ತು ಚಿಕಿತ್ಸಾ ವಿಭಾಗವನ್ನು ಸ್ಥಗಿತಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ಎಂಟು ವೈದ್ಯರ ಹುದ್ದೆಗಳಿದ್ದು, ಮಂಜೇಶ್ವರ ಬ್ಲಾಕ್ ಪಂಚಾಯತಿ ಆಡಳಿತ ಸಮಿತಿ ಅನುಮೋದಿಸಲ್ಪಟ್ಟ ಒಬ್ಬ ವೈದ್ಯ ಸೇರಿದಂತೆ ಐದು ಜನರಿದ್ದಾರೆ.

           ಜಿಲ್ಲೆಯ ಉತ್ತರ ಭಾಗದ ಗಡಿ ಭಾಗದಲ್ಲಿರುವ ಈ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯದಲ್ಲಿ ಹಿಂದುಳಿದಿದ್ದು, ಸÀರ್ಕಾರದ ಬಹುಕಾಲದ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಬೇಕು ಹಾಗೂ ಎಲ್ಲ ವಿಭಾಗದ ವೈದ್ಯರ ಸೇವೆಯನ್ನು ಹಗಲಿರುಳು ನೀಡಬೇಕು ಎಂದು ಮುಸ್ಲಿಂ ಲೀಗ್ ಆಗ್ರಹಿಸಿದೆ.

            13.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಹುಮಹಡಿ ನೂತನ ಕಟ್ಟಡದ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು. ರೋಗಿಗಳಿಗೆ ಉತ್ತಮ ಚಿಕಿತ್ಸೆ ಪಡೆಯಲು ಅಧಿಕಾರಿಗಳು ಅವಕಾಶ ಕಲ್ಪಿಸಬೇಕು ಹಾಗೂ ನಿರ್ಲಕ್ಷ್ಯ ಮುಂದುವರಿದರೆ ಮುಸ್ಲಿಂ ಲೀಗ್ ಪ್ರಬಲ ಮುಷ್ಕರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಸಭೆ ಎಚ್ಚರಿಸಿತು.

              ಮುಸ್ಲಿಂಲೀಗ್ ಅಧ್ಯಕ್ಷ ಅಝೀಝ್ ಮರಿಕೆ ಅಧ್ಯಕ್ಷತೆ ವಹಿಸಿದ್ದರು.ಶಾಸಕ  ಎ.ಕೆ.ಎಂ.ಅಶ್ರಫ್, ಜಿಲ್ಲಾ ಪದಾಧಿಕಾರಿಗಳಾದ ಎಂ.ಬಿ.ಯೂಸುಫ್, ಟಿ.ಎ.ಮೂಸಾ, ಹಾರಿಸ್ ಚೂರಿ, ಕ್ಷೇತ್ರದ ಪದಾಧಿಕಾರಿಗಳಾದ ಯು.ಕೆ.ಸೈಫುಲ್ಲಾ ತಂಙಳ್, ಅಂದುಂಞÂ ಹಾಜಿ ಚಿಪ್ಪಾರ್, ಟಿ.ಎಂ.ಮೂಸಾ ಕುಂಞÂ್ಞ ಹಾಜಿ, ಅಬ್ದುಲ್ಲ ಮಾಳಿಗೆ, ಎಂ.ಪಿ.ಖಾಲಿದ್, ಸಿದ್ದೀಕ್ ಒಳಮುಗರು,  ಖಾಲಿದ್ ದುರ್ಗಿಪಳ್ಳ, ಪಿ.ಬಿ.ಅಬೂಬಕರ್, ಹನೀಫ್ ಹಾಜಿ ಪೈವಳಿಕೆ, ಎಂ ಅಬ್ದುಲ್ಲ ಮುಗು, ಅಝೀಝ್ ಕಳತ್ತೂರು, ಯೂಸುಫ್ ಉಳುವಾರ್, ಅಬ್ದುಲ್ಲ ಕಜೆ, ಮುಹಮ್ಮದ್ ಪುತ್ತು ಪಾವೂರು, ಬಿ.ಎ.ಅಬ್ದುಲ್ ಮಜೀದ್, ವಾಹಿದ್ ಉಲಂ, ತಾಜುದ್ದೀನ್ ಕಡಂಬಾರ್, ಸಾಲಿ ಹಾಜಿ ಝಾ, ಅಝೀಝ್ ಮುಹಮ್ಮದ್ ಕುಂಞÂ, ಇ.ಕೆ. ಮುಹಮ್ಮದ್ ಕುಂಞÂ, ಝೆಡ್ ಎ ಕಯ್ಯಾರ್, ಬಿ.ಎಂ.ಮುಸ್ತಫಾ, ಸಿದ್ದೀಕ್ ದಂಡಗೋಳಿ, ಆಯೆಷತ್ ತಾಹಿರಾ, ನಮೀಝ್ ಕುದುಕೋಟಿ, ಖಲೀಲ್ ಮರಿಕೆ, ಬಿ.ಕೆ.ಅಬ್ದುಲ್ ಕಾದರ್, ಬಿ.ಎ.ರಹ್ಮಾನ್ ಆರಿಕ್ಕಾಡಿ, ಇಬ್ರಾಹಿಂ ಮುಂಡ್ಯತಡ್ಕ, ಎ.ಮುಕ್ತಾರ್, ಸಲೀಂ ಧರ್ಮನಗರ, ಗೋಲ್ಡನ್ ಮೂಸಾ ಕುಂಞÂ್ಞ, ಮೂಸಾ ಮಾಸ್ತರ್, ಲತೀಫ್  ಉಪ್ಪಳ, ಲತೀಫ್ ಬಂದ್ಯೋಡು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries