ಠಾಣೆ: ಯುವಕರಿಗೆ ಉದ್ಯೋಗ ಅವಕಾಶಕ್ಕೆ ಅಗತ್ಯವಾದ ಸ್ವವಿವರಗಳನ್ನು (ಬಯೊಡೇಟಾ) ಆಕರ್ಷಕವಾಗಿ ಸಿದ್ಧಪಡಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಮಹಾರಾಷ್ಟ್ರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ನಿರ್ಧರಿಸಿದೆ.
ಠಾಣೆ: ಯುವಕರಿಗೆ ಉದ್ಯೋಗ ಅವಕಾಶಕ್ಕೆ ಅಗತ್ಯವಾದ ಸ್ವವಿವರಗಳನ್ನು (ಬಯೊಡೇಟಾ) ಆಕರ್ಷಕವಾಗಿ ಸಿದ್ಧಪಡಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಮಹಾರಾಷ್ಟ್ರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ನಿರ್ಧರಿಸಿದೆ.
ಇದರಿಂದ ರಾಜ್ಯದಲ್ಲಿನ ಒಂದು ಲಕ್ಷ ಯುವಕರಿಗೆ ಉದ್ಯೋಗ ಪಡೆಯಲು ಅನುಕೂಲವಾಗಲಿದೆ.
ಯುವಕರು ಉತ್ತಮವಾದ ಉದ್ಯೋಗ ಅವಕಾಶಗಳನ್ನು ಹೊಂದಿದ್ದರೂ, ಹಲವು ಬಾರಿ ಸ್ವವಿವರ ಸರಿ ಇಲ್ಲದ ಕಾರಣ ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಯುವಕರಿಗೆ ಡಿಜಿಟಲ್ ಸ್ವವಿವರದ ವ್ಯವಸ್ಥೆ ಮಾಡಲು ಸಚಿವರು ನಿರ್ಧರಿಸಿದರು ಎಂದು ತಿಳಿಸಲಾಗಿದೆ.