HEALTH TIPS

ಸರಿಗನ್ನಡ ಬಳಸುವ-ಬೆಳೆಸುವ ರಾಷ್ಟ್ರೋತ್ಥಾನದ ಸಾಹಿತ್ಯ ಕೈಂಕರ್ಯ ಸ್ತುತ್ಯರ್ಹ: ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್: ಕನ್ನಡ ಪುಸ್ತಕ ಹಬ್ಬ ಉದ್ಘಾಟಿಸಿ ಅಭಿಮತ

               ಬೆಂಗಳೂರು: ಸಾಮರಸ್ಯದ ಜೊತೆಗೆ ಸಮಂಜಸವಾದ ಮೌಲ್ಯಯುತ ಸಾಹಿತ್ಯ ಬರಹಗಳಿಗೆ ಸದಾ ಜನಮನ್ನಣೆ ಇದೆ. ಉತ್ಕøಷ್ಟ ಸಾಹಿತ್ಯ ಬರಹಗಳು ಸಮಾಜದ ದಾರಿದೀಪಕವಾಗಿ ಸದಭಿಮಾನಿ ವ್ಯಕ್ತಿತ್ವ ರೂಪಣೆಗೆ ಬೆಂಬಲ ನೀಡುತ್ತದೆ ಎಂದು ಚಲಚ್ಚಿತ್ರ ನಟ-ನಿರ್ದೇಶಕ, ‘ಸಂಸ್ಕಾರಭಾರತಿ’ಯ ಪ್ರಾಂತ ಅಧ್ಯಕ್ಷ  ಸುಚೇಂದ್ರಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

               ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ  ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ ವನ್ನು ಬುಧವಾರ ಬೆಳಿಗ್ಗೆ ದೀಪ ಪ್ರಜ್ವಲಗೈದು ಉದ್ಘಾಟಿಸಿ ಮಾತನಾಡಿದರು.


             ಅಧ್ಯಯನಶೀಲರಾಗಲು ಅನ್ವೇಶಿಗಳಾಗಬೇಕು. ಅರಿವಿನ ವಿಸ್ತಾರತೆಗೆ ನಾವು ಓದುವ ಸಾಹಿತ್ಯ ಬರಹಗಳು ಸ-ಹಿತಕರವಾಗಿರಬೇಕು. ಇಂದು ಸರಿಗನ್ನಡವನ್ನು ಬಳಸುವ-ಬೆಳೆಸುವ ತುರ್ತು ಇದೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಬಹು ಆಯಾಮದ ಚಟುವಟಿಕೆಗಳೆಲ್ಲ ಅನುಕರಣೆ-ಅನುಸರಣೀಯವಾದುದು. ಯುವ ಸಮೂಹವನ್ನು ಸತ್ಪಥದಲ್ಲಿ ಮುನ್ನಡೆಸುವ ಸಮಗ್ರ ಚಿಂತನೆಗಳ ಬರಹಗಳನ್ನು ಓದುಗರಿಗೆ ತಲುಪಿಸುವ ಕೈಂಕರ್ಯ ಸ್ತುತ್ಯರ್ಹವಾದುದು ಎಂದು ಅವರು ಈ ಸಂದರ್ಭ ತಿಳಿಸಿದರು.

               ವಿಜಯಕರ್ನಾಟಕ ದಿನಪತ್ರಿಕೆಯ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ  ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಹೊಸ ತಲೆಮಾರಿನ ಮಕ್ಕಳಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸವನ್ನು ರೂಢಿಸುವಲ್ಲಿ ಪ್ರಯತ್ನಗಳು ಇನ್ನಷ್ಟು ಬೆಳೆಯಬೇಕು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪರಂಪರೆಯ ಅರಿವನ್ನು ಪಸರಿಸುವ ಸವಾಲುಗಳ ಮಧ್ಯೆ ಇಂತಹ ಪುಸ್ತಕೋತ್ಸವಗಳು ಭರವಸೆಯ ಬೆಳಕಾಗಿವೆ ಎಂದರು.


              ಸಮಾರಂಭದ ಅಧ್ಯಕ್ಷ ವಹಿಸಿದ್ದ ‘ಪ್ರಜ್ಞಾಪ್ರವಾಹ’ದ ರಾಷ್ಟ್ರೀಯ ಸಹ-ಸಂಯೋಜಕ  ರಘುನಂದನ್  ಅವರು ಮಾತನಾಡಿ, ನಾವು ಓದಿದ, ನಮಗೆ ಪ್ರೇರಣೆ ನೀಡಿದ ಉತ್ತಮ ಪುಸ್ತಕಗಳನ್ನು ಮತ್ತೊಬ್ಬರಿಗೆ ಹೇಳುವ ಕೆಲಸ ನಮ್ಮಿಂದಾಗಬೇಕು. ಇಷ್ಟಪಟ್ಟು ಓದುವ ಕೃತಿ ವ್ಯಕ್ತಿ, ವ್ಯಕ್ತಿತ್ವವನ್ನು ವಿಸ್ತಾರತೆಗೆ ಕೊಂಡೊಯ್ಯುತ್ತದೆ ಎಂದರು. ರಾಷ್ಟ್ರೋತ್ಥಾನ ಪ್ರಕಟ ಭಾರತ-ಭಾರತಿ, ಅಜೇಯ ಮುಂತಾದ ಮೌಲ್ಯಯುತ ಕೃತಿಗಳು ವೈಚಾರಿಕತೆಯಿಂದೊಡಗೂಡಿ ಸಾಹಿತ್ಯ ಪ್ರಪಂಚಕ್ಕೆ ಮಹತ್ವಿಕೆಯ ಕೊಡುಗೆ ನೀಡಿದೆ. ಬರಹ ಸಣ್ಣದಾದರೂ ಹರಿವು ನಿರಂತರವಾಗಿರಲಿ ಎಂದು ಕರೆನೀಡಿದರು.


                   ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ಅಭ್ಯಾಗತರನ್ನು ಅಭಿನಂದಿಸಿದರು. ಉತ್ಥಾನ ಮಾಸಪತ್ರಿಕೆಯ ಗೌರವ ಸಂಪಾದಕ, ಸಾಹಿತಿ, ಬರಹಗಾರ ನಾಡೋಜ ಎಸ್.ಆರ್.ರಾಮಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್ತಿನ ಕೋಶಾಧ್ಯಕ್ಷ ಕೆ.ಎಸ್.ನಾರಾಯಣ, ಲೇಖಕ ವಿ.ಪಿ.ಪ್ರೇಮಕುಮಾರ್ ಮೊದಲಾದ ಗಣ್ಯರು ಭಾಗವಹಿಸಿದ್ದರು. 

                     ರಾಷ್ಟ್ರೋತ್ಥಾನ ಸಾಹಿತ್ಯದ ಸಂಯೋಜಕರಾದ ವಿಘ್ನೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉತ್ಥಾನ ಮಾಸಪತ್ರಿಕೆಯ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ವಂದಿಸಿದರು. ಶ್ರೀಮತಿ.ರಶ್ಮಿ  ಕಾರ್ಯಕ್ರಮ ನಿರೂಪಿಸಿದರು. ಸುನಯನ ಮತ್ತು ತಂಡದವರು ರಾಜ್ಯೋತ್ಸವ ಗೀತೆ ಹಾಡಿದರು. 

            ನವೆಂಬರ್ 1ರಿಂದ ಡಿಸೆಂಬರ್ 3ರ ವರೆಗೆ ಒಟ್ಟು 33 ದಿನಗಳ ಕಾಲ ಕೇಶವಶಿಲ್ಪ  ಸಭಾಂಗಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 8ರ ವರೆಗೆ ಪುಸ್ತಕೋತ್ಸವ ನಡೆಯಲಿದ್ದು, ಉಪನ್ಯಾಸ, ಸಂವಾದ ಸಹಿತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರತಿದಿನ ಆಯೋಜಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries