ಉಪ್ಪಳ: ಶನಿವಾರ ಮತ್ತು ಭಾನುವಾರ ಜಿಲ್ಲೆಯಲ್ಲಿ ನಡೆಯುತ್ತಿರುವ ನವಕೇರಳ ಸಮಾವೇಶದ ಪ್ರಥಮ ವೇದಿಕೆ ಮಂಜೇಶ್ವರ ಮಂಡಲದ ಪ್ರಚಾರಕ್ಕಾಗಿ ಪ್ರಚಾರ ಮೆರವಣಿಗೆ ನಡೆಯಿತು. ಪೈವಳಿಗೆ ಪಂಚಾಯಿತಿ ನೇತೃತ್ವದಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಆರ್.ಡಿ.ಒ ಅತುಲ್ ಸ್ವಾಮಿನಾಥ್, ಸಂಘಟನಾ ಸಮಿತಿ ಸಂಚಾಲಕ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಆರ್.ಜಯಾನಂದ, ಪುತ್ತಿಗೆ ಅಧ್ಯಕ್ಷ ಸುಬ್ಬಣ್ಣ ಆಳ್ವ, ಪೈವಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಯಂತಿ, ವರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಭಾರತಿ ಮತ್ತಿತರರು ಮೆರವಣಿಗೆಗೆ ಚಾಲನೆ ನೀಡಿದರು. ಜನಪ್ರತಿನಿಧಿಗಳು ಹಾಗೂ ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.
ಪೈವಳಿಕೆ ಚೇವಾರು ರಸ್ತೆಯಿಂದ ಆರಂಭವಾದ ಮೆರವಣಿಗೆ ಪೈವಳಿಕೆ ನಗರದಲ್ಲಿ ಮುಕ್ತಾಯವಾಯಿತು. ಸಾರ್ವಜನಿಕರ ಸಹಭಾಗಿತ್ವ ಹಾಗೂ ಕಲಾತ್ಮಕ ಪ್ರದರ್ಶನಗಳಿಂದ ಜನಮನ ಸೆಳೆಯಿತು. ಕೇರಳೀಯ ಶೈಲಿಯ ವಸ್ತ್ರಗಳನ್ನು ಧರಿಸಿದ ಮಹಿಳೆಯರು, ಮುತ್ತುಕೊಡೆ, ಸಂಗೀತ ಮೇಳಗಳು, ವಿವಿಧ ರೀತಿಯ ಒಪ್ಪನ, ಯಕ್ಷಗಾನ, ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು.
ಮಂಜೇಶ್ವರದ ಕಲಾವಿದರಿಂದ ಕಲಾ ಕಾರ್ಯಕ್ರಮ:
ನವ ಕೇರಳ ಸದಸ್‍ನ ಪ್ರಚಾರಕ್ಕಾಗಿ ಮಂಜೇಶ್ವರ ಮಂಡಲ ಕೈರಳಿ ಪತ್ತುರುಮಾಳ್ ಕಾರ್ಯಕ್ರಮದ ಮೂಲಕ ಪುತ್ತಿಗೆ ವಿದ್ಯಾಲಯದ ಮಕ್ಕಳು, ಸ್ಥಳೀಯ ಕಲಾವಿದರು ಮತ್ತು ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗಳನ್ನು ಪ್ರದರ್ಶಿಸಿತು. ಮಂಜೇಶ್ವರ ನವಕೇರಳ ಸಮಾವೇಶದ ಮೊದಲ ವೇದಿಕೆಯಾದ ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲಾ ಕಾರ್ಯಕ್ರಮಗಳು ನಡೆದವು. ಯಕ್ಷಗಾನ, ತಿರುವಾದಿರ, ಒಪ್ಪನ, ಭರತನಾಟ್ಯ, ಮೋಹಿನಿಯಾಟ್ಟಂ, ಮಾಪಿಳ್ಳಪ್ಪಾಟ್, ಮುಂತಾದ ಪ್ರದರ್ಶನಗಳು ನಡೆದವು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇಂಪಾಶೇಖರ್, ಮಾಜಿ ಸಂಸದ ಪಿ.ಕರುಣಾಕರನ್, ಸಬ್ ಕಲೆಕ್ಟರ್ ಸುಫಿಯಾನ್ ಅಹಮದ್, ಆರ್.ಡಿ.ಒ ಅತುಲ್ ಸ್ವಾಮಿನಾಥ್, ವಿ.ವಿ.ರಮೇಶನ್ ಉಪಸ್ಥಿತರಿದ್ದರು.