ಕೋಝಿಕ್ಕೋಡ್: ಕೇರಳದಲ್ಲಿ ಹೊಸ ವಲಸೆ ಹಕ್ಕಿ ಪತ್ತೆಯಾಗಿದೆ. ಪಕ್ಷಿ ವೀಕ್ಷಕರು ಕಾಕೂರ್ ಬಳಿಯ ಪೊನ್ ಕುನ್ ಬೆಟ್ಟದಲ್ಲಿ ಹೊಸ ವಲಸೆ ಹಕ್ಕಿಯನ್ನು ಗುರುತಿಸಿದ್ದಾರೆ.
ಬಿಳಿ ಗಂಟಲಿನ ಸೂಜಿ ಬಾಲದ ಪಕ್ಷಿಯಾದ ಇದು ಆಸ್ಟ್ರೇಲಿಯಾ, ಜಪಾನ್, ಮಂಗೋಲಿಯಾ, ಚೀನಾ ಮತ್ತು ರμÁ್ಯದಲ್ಲಿ ಕಂಡುಬರುವ ವಲಸೆ ಹಕ್ಕಿಯಾಗಿದೆ. ಪಕ್ಷಿ ವೀಕ್ಷಕರಾದ ಟಿ.ಕೆ.ಸಾನುರಾಜ್ ಹಾಗೂ ಎನ್.ಯದುಪ್ರಸಾದ್ ಈ ಅಪರೂಪದ ಪಕ್ಷಿಯ ಚಿತ್ರ ಸೆರೆ ಹಿಡಿದರು.
ಹಿರಿಯ ಪಕ್ಷಿ ವೀಕ್ಷಕರಾದ ಸತ್ಯನ್ ಮೇಪಯ್ಯೂರ್ ಅವರನ್ನೊಳಗೊಂಡ ತಂಡವು ಸರಪಕ್ಷಿಯನ್ನು ಗುರುತಿಸಿದೆ. ಪಕ್ಷಿ ವೀಕ್ಷಕರ ಸಂಘದ ಸದಸ್ಯರು ಇದಕ್ಕೆ ಶ್ವೇತಕಂದನ್ ಮುಲ್ವಲನ್ ಸರಪಕ್ಷಿ ಎಂದು ಹೆಸರಿಸಿದ್ದಾರೆ. ಅವರ ವೈಜ್ಞಾನಿಕ ಹೆಸರು ಹಿರುಂಟಪಸ್ ಕೋಡಿಕ್ಯುಟಸ್. ಇದರೊಂದಿಗೆ ಕೇರಳದಲ್ಲಿ ಕಂಡುಬರುವ ಪಕ್ಷಿಗಳ ಸಂಖ್ಯೆ 554 ಕ್ಕೆ ಏರಿಕೆಯಾಗಿದೆ.
ದಕ್ಷಿಣ ಭಾರತದಲ್ಲಿ ಸರಪಕ್ಷಿ ಕುಟುಂಬದ ವಲಸೆ ಹಕ್ಕಿ ಪತ್ತೆಯಾಗಿರುವುದು ಇದೇ ಮೊದಲು. ಸಾಮಾನ್ಯವಾಗಿ ಕೇರಳವನ್ನು ಪಕ್ಷಿಗಳ ವಲಸೆ ಮಾರ್ಗದಲ್ಲಿ ಸೇರಿಸಲಾಗಿಲ್ಲ. ಕೇರಳದ ಗ್ರೇಟರ್ ಮುಲ್ವಲನ್‍ನಂತೆಯೇ ಇದ್ದರೂ, ಶ್ವೇತಕಂಠದ ಗಲ್ಲ, ಗಂಟಲು ಮತ್ತು ಕುತ್ತಿಗೆಯ ಮೇಲಿನ ಬಿಳಿ ಬಣ್ಣ ಮತ್ತು ಕೊಕ್ಕು ಮತ್ತು ಕಣ್ಣುಗಳ ಕೆಳಗೆ ಗಾಢ ಬಣ್ಣದಿಂದ ಗುರುತಿಸಲ್ಪಡುತ್ತದೆ. ಅವು ಹೆಚ್ಚಿನ ವೇಗದಲ್ಲಿ ಹಾರಬಲ್ಲವು ಮತ್ತು ಹಾರುವ ಮೂಲಕ ತಮ್ಮ ಬೇಟೆಯನ್ನು ಹುಡುಕುವ ಸಾಮಥ್ರ್ಯವನ್ನು ಹೊಂದಿವೆ.