ಎರ್ನಾಕುಳಂ: ವಿವಿಧ ಬೇಡಿಕೆ ಮುಂದಿರಿಸಿ ನ. 21ರಂದು ನಡೆಸಲುದ್ದೇಶಿಸಿದ್ದ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿಕಾಲ ಖಾಸಗಿ ಬಸ್ ಮುಷ್ಕರ ಹಿಂಪಡೆಯಲಾಗಿದೆ. ಸಾರಿಗೆ ಸಚಿವ ಆಂಟನಿರಾಜು ಅವರೊಂದಿಗೆ ಎರ್ನಾಕುಳಂನಲ್ಲಿ ನಡೆಸಿದ ಮಾತುಕತೆಯನ್ವಯ ಈ ತೀರ್ಮಾನ ಕೈಗೊಳ್ಳಲಾಗಿದೆ.
140 ಕಿ.ಮೀ. ದೂರದ ಮಿತಿಯನ್ನು ಪರಿಗಣಿಸದೆ ಅಸ್ತಿತ್ವದಲ್ಲಿರುವ ಎಲ್ಲಾ ಬಸ್‍ಗಳ ಪರವಾನಿಗೆಯನ್ನು ನವೀಕರಿಸಿನೀಡಬೇಕೆಂಬ ಮನವಿಯನ್ನು ಪರಿಶೀಲಿಸುವುದು, ವಿದ್ಯಾರ್ಥಿಗಳ ಪ್ರಯಾಣ ದರ ಹೆಚ್ಚಿಸುವ ತಿರ್ಮಾನದ ಬಗ್ಗೆ ರಘುರಾಮನ್ ಆಯೋಗದ ವರದಿ ಕೈಸೇರಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಈ ಮಧ್ಯೆ ಬಸ್‍ಗಳಲ್ಲಿ ಕ್ಯಾಮೆರಾ ಮತ್ತು ಸೀಟ್‍ಬೆಲ್ಟ್ ಅಳವಡಿಕೆ ಯಥಾಪ್ರಕಾರ ಮುಮದುವರಿಯಲಿದೆ. ಸಿಸಿ ಕ್ಯಾಮರಾ ಅಳವಡಿಕೆಗೆ ಸರ್ಕಾರದ ಕಡೆಯಿಂದ 5ಸಾವಿರ ರೂ. ಸಬ್ಸಿಡಿ ಲಭಿಸಲಿರುವುದಾಗಿಯೂ ಸಚಿವರು ತಿಳಿಸಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡುವ ತೀರ್ಮಣ ಕೈಗೊಳ್ಳಲಾಗಿದೆ ಎಂದು ಬಸ್ ಮಾಲಿಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಒಂದು ದಿನದ ಖಾಸಗಿ ಮುಷ್ಕರ ನಡೆಸಲಾಗಿತ್ತು.