ಮಂಜೇಶ್ವರ : ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದ 2022 - 2023 ರ ಸಾಲಿನ ಜುಲೈನಲ್ಲಿ ನಡೆದ ಬಿ ಎಡ್ ಪದವಿಯ ಅಂತಿಮ ಪರೀಕ್ಷೆಯಲ್ಲಿ ಎಂ.ಇ.ಎಸ್. ಟೈನಿಂಗ್ ಕಾಲೇಜು ಎಡತ್ತಲದ ವಿದ್ಯಾರ್ಥಿನಿ ಹಾಗೂ ಮಂಜೇಶ್ವರ ಉದ್ಯಾವರ ನಿವಾಸಿ ಅಬ್ದುಲ್ ಹಮೀದ್ ಹಾಗೂ ಪೌಝಿಯ ದಂಪತಿಗಳ ಪುತ್ರಿ, ಮೊಹಮ್ಮದ್ ಮಿಗ್ದಾದ್ ರ ಪತ್ನಿ ಹಿನ ಖದೀಜ ದ್ವೀತಿಯ ರ್ಯಾಂಕ್ ಪಡೆದು ರಾಜ್ಯಕ್ಕೆ ಮಾದರಿಯಾಗಿದ್ದಾಳೆ.
ಕುಂಜತ್ತೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರ್ತಿಗೊಳಿಸಿ ಬಂಗ್ರಮಂಜೇಶ್ವರ ಹೈಯರ್ ಸೆಕಂಡರಿ ಶಾಲೆಯಲ್ಲಿ ಪಿ ಯು ಸಿ ಪೂರ್ಣಗೊಳಿಸಿ ಸ್ಟೆಂಟ್ ಆಗ್ನೇಸ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ನಿರ್ವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಎಂ ಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದರು.