ಕಾಸರಗೋಡು: ಪೆರಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಇಫ್ತಿಕಾರ್ ಅಹ್ಮದ್ ವಿರುದ್ಧ ವಿದ್ಯಾರ್ಥಿನಿಯರು ದೂರು ದಾಖಲಿಸಿದ್ದಾರೆ.
ನಿರಂತರವಾಗಿ ವಿದ್ಯಾರ್ಥಿನಿಯರ ಜತೆ ಅಶ್ಲೀಲವಾಗಿ ಮಾತನಾಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಲಾಗಿದೆ.
ತರಗತಿಗಳನ್ನು ತೆಗೆದುಕೊಳ್ಳುವಾಗ ಲೈಂಗಿಕವಾಗಿ ಮಾತನಾಡುತ್ತಾರೆ ಮತ್ತು ನಿಯಮಿತವಾಗಿ ಕುಡಿದು ತರಗತಿಗೆ ಪ್ರವೇಶಿಸುತ್ತಾರೆ ಎಂದು ವಿದ್ಯಾರ್ಥಿಗಳು ದೂರುತ್ತಾರೆ. 31 ಲೈಂಗಿಕ ಕಿರುಕುಳದ ಘಟನೆಗಳನ್ನು ವಿವರಿಸುವ ಏಳು ಪುಟಗಳ ದೂರನ್ನು ವಿದ್ಯಾರ್ಥಿಗಳು ದಾಖಲಿಸಿದ್ದಾರೆ. ದೂರಿಗೆ 33 ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ ಮತ್ತು ವಿಶ್ವವಿದ್ಯಾಲಯದ ಆಂತರಿಕ ಕುಂದುಕೊರತೆ ಪರಿಹಾರ ಸಮಿತಿಗೆ (ಐಸಿಸಿ) ರವಾನಿಸಲಾಗಿದೆ.
ಪರೀಕ್ಷೆ ವೇಳೆ ತಲೆ ಕೆಡಿಸಿಕೊಂಡ ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದನ್ನೂ ತೋರಿಸಲಾಗಿದೆ. ವಿದ್ಯಾರ್ಥಿ ಸಂಘದ ಮುಖ್ಯಸ್ಥರಿಗೆ ವಿಷಯ ಬಹಿರಂಗವಾದ ನಂತರ ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ. ಆದರೆ ಶೇಕಡಾ 60 ರಷ್ಟು ಆಂತರಿಕ ಅಂಕಗಳ ಬಗ್ಗೆ ಯೋಚಿಸಿ, ವಿದ್ಯಾರ್ಥಿಗಳು ದೂರು ನೀಡಲು ಹೆದರುತ್ತಿದ್ದರು.
ಈ ಶಿಕ್ಷಕರೇ ಇಂಗ್ಲಿಷ್ ಕೋರ್ಸ್‍ನ ಪಾಠಗಳನ್ನು ವಿನ್ಯಾಸಗೊಳಿÀ್ದ್ದರು. ಹಲವು ಬಾರಿ ಕವನ ವಾಚಿಸುವ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಅಸಭ್ಯವಾಗಿ ಮಾತನಾಡುತ್ತಿದ್ದರು. ಹೆಚ್ಚಿನ ದಿನ ಹುಡುಗಿಯರನ್ನು ನೋಡಿಕೊಂಡು ತರಗತಿ ತೆಗೆದುಕೊಳ್ಳುತ್ತಿದ್ದರು. ದೂರು ದಾಖಲಿಸಿದ ಕೂಡಲೇ ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ಆಶಾ ಆದೇಶ ಹೊರಡಿಸಿದ್ದರು. ಆದರೆ, ಅವರನ್ನು ಅಮಾನತು ಮಾಡಲು ಅಥವಾ ವಿಭಾಗ ಪ್ರವೇಶಕ್ಕೆ ನಿಷೇಧ ಹೇರಲು ಮುಂದಾಗದ ಕಾರಣ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೂರು ನೀಡಿ ಹಲವು ದಿನಗಳು ಕಳೆದರೂ ತಪ್ಪಿತಸ್ಥ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಕಾರಣ ವಿಶ್ವವಿದ್ಯಾಲಯದ ಆಡಳಿತ ಬ್ಲಾಕ್ ಎದುರು ಎಬಿವಿಪಿ ಪ್ರತಿಭಟನಾ ಧರಣಿ ನಡೆಸಿತು. ನಂತರ ವಿಶ್ವವಿದ್ಯಾನಿಲಯ ಅಧಿಕಾರಿಗಳೊಂದಿಗೆ ಎಬಿವಿಪಿ ಪ್ರತಿನಿಧಿಗಳು ನಡೆಸಿದ ಚರ್ಚೆಯಲ್ಲಿ 48 ಗಂಟೆಯೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮೇರೆಗೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ಎಬಿವಿಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಆರ್ಯಲಕ್ಷ್ಮಿ ಮಾತನಾಡಿ, ವಿಶ್ವವಿದ್ಯಾಲಯದ ಅಧಿಕಾರಿಗಳು ತಪ್ಪಿತಸ್ಥ ಶಿಕ್ಷಕರನ್ನು ರಕ್ಷಿಸಲು ಮತ್ತೆ ಪ್ರಯತ್ನಿಸುತ್ತಿದ್ದರೆ, ಎಬಿವಿಪಿ ತೀವ್ರ ಪ್ರತಿಭಟನೆ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಿದೆ ಎಂದಿರುವರು.