ಆಲಪ್ಪುಳ: ಎಸ್.ಎಫ್.ಐ. ಮಾಜಿ ನಾಯಕ ನಿಖಿಲ್ ಥಾಮಸ್ ನಕಲಿ ಪ್ರಮಾಣಪತ್ರ ಬಳಸಿ ಪಿಜಿ ಪ್ರವೇಶ ಪಡೆದಿರುವ ಘಟನೆಯಲ್ಲಿ ಕೇರಳ ವಿಶ್ವವಿದ್ಯಾಲಯ ಕ್ರಮ ಕೈಗೊಂಡಿದೆ.
ಘಟನೆಯಲ್ಲಿ ಕಾಯಂಕುಳಂ ಎಂಎಸ್‍ಎಂ ಕಾಲೇಜಿನ ಪ್ರಾಂಶುಪಾಲರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಆರು ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.
ನಿಖಿಲ್ ಥಾಮಸ್ ಕಳಿಂಗ ವಿಶ್ವವಿದ್ಯಾಲಯದ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿ ಸ್ನಾತಕೋತ್ತರ ಪದವಿಗಾಗಿ ಕಾಯಂಕುಳಂನ ಎಂಎಸ್‍ಎಂ ಕಾಲೇಜಿಗೆ ಸೇರಿದ್ದರು. ಆದರೆ ಅವರು ಕಳಿಂಗ ವಿಶ್ವವಿದ್ಯಾಲಯದ ವಿದ್ಯಾರ್ಥಿಯಲ್ಲ ಮತ್ತು ಅವರ ಪದವಿ ನಕಲಿ ಎಂದು ಕಳಿಂಗ ವಿಶ್ವವಿದ್ಯಾಲಯ ಹೇಳಿದೆ. ಇದರಿಂದಾಗಿ ಕೇರಳ ವಿಶ್ವವಿದ್ಯಾಲಯ ಕ್ರಮವನ್ನು ಬಿಗಿಗೊಳಿಸಿದೆ.