ಕಾಸರಗೋಡು: ಶ್ರೀ ನಾರಾಯಣ ಧರ್ಮ ಪರಿಪಾಲನಂ(ಎಸ್‍ಎನ್‍ಡಿಪಿ)ಕಾಸರಗೋಡು ಘಟಕ ವತಿಯಿಂದ ಕುಟುಂಬ ಸಭೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಕಾಸರUಗೋಡು ಹಳೇ ಬಸ್ ನಿಲ್ದಾಣ ವಠಾರದ ವ್ಯಾಪಾರಿ ಭವನದಲ್ಲಿ ಜರುಗಿತು.
ಎಸ್.ಎನ್.ಡಿ.ಪಿ. ಕಾಸರಗೋಡು ಒಕ್ಕೂಟದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಎಸ್‍ಎನ್‍ಡಿಪಿ ತಪಾಸಣಾ ಅಧಿಕಾರಿ ಪಿ ಟಿ. ಲಾಲು ಸಮಾರಂಭ ಉದ್ಘಾಟಿಸಿದರು. ಸಂಘಟನೆ ಮಂಜೇಶ್ವರ ಯೂನಿಯನ್ ಅಧ್ಯಕ್ಷ ಕೆ. ನಾರಾಯಣ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸಭೆಯ ನಿರ್ದೇಶಕ, ವಕೀಲ ಪಿ. ಕೆ. ವಿಜಯನ್, ಮೋಹನನ್ ಮೀಪುಗುರಿ, ವನಿತಾ ಸಂಗಮದ ಅಧ್ಯಕ್ಷೆ ಸುನೀತಾ ದಾಮೋದರನ್, ಉಪಾಧ್ಯಕ್ಷೆ ಪವಿತ್ರ, ಕಾರ್ಯದರ್ಶಿ ಮೋಹಿನಿ ಹರೀಶ್, ಜಯಂತ ಪಚ್ಚಂಬಳ ಉಪಸ್ಥಿತರಿದ್ದರು. ಒಕ್ಕೂಟದ ಕಾಸರಗೋಡು ಘಟಕ ಕಾರ್ಯದರ್ಶಿ ಗಣೇಶ್ ಪರಕಟ್ಟ ಸ್ವಾಗತಿಸಿ,ದರು. ಒಕ್ಕೂಟದ ಉಪಾಧ್ಯಕ್ಷ ಎ. ಟಿ. ವಿಜಯನ್ ವಂದಿಸಿದರು.