ಗೋಲ್‌ಪಾರಾ: ಹಲವು ಕೊಲೆ, ಸುಲಿಗೆ, ಡಕಾಯಿತಿ ಪ್ರಕರಣಗಳಲ್ಲಿ ಅಸ್ಸಾಂ ಪೊಲೀಸರಿಗೆ ಬೇಕಾಗಿದ್ದ ಇಬ್ಬರು ಮೋಸ್ಟ್ ವಾಟೆಂಡ್ ದರೋಡೆಕೋರರನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದಾರೆ.
ಗೋಲ್‌ಪಾರಾ: ಹಲವು ಕೊಲೆ, ಸುಲಿಗೆ, ಡಕಾಯಿತಿ ಪ್ರಕರಣಗಳಲ್ಲಿ ಅಸ್ಸಾಂ ಪೊಲೀಸರಿಗೆ ಬೇಕಾಗಿದ್ದ ಇಬ್ಬರು ಮೋಸ್ಟ್ ವಾಟೆಂಡ್ ದರೋಡೆಕೋರರನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದಾರೆ.
ಈ ಘಟನೆ ಸೋಮವಾರ ತಡರಾತ್ರಿ ಗೋಲ್‌ಪಾರಾ ವ್ಯಾಪ್ತಿಯ ಅರಣ್ಯ ಪ್ರದೇಶದ ಬಳಿ ನಡೆದಿದೆ.
ಘಟನೆಯಲ್ಲಿ ಎಎಸ್‌ಪಿ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಗೋಲ್‌ಪಾರಾ ಎಸ್‌ಪಿ ವಿವಿ ರಾಕೇಶ್ ರೆಡ್ಡಿ ತಿಳಿಸಿದ್ದಾರೆ.
ಮೃತ ದರೋಡೆಕೋರರನ್ನು ಅಮರ್ ಥಾಪಾ, ಫರಿದುಲ್ ಇಸ್ಲಾಂ ಎಂದು ಗುರುತಿಸಲಾಗಿದೆ.
ಗೋಲ್‌ಪಾರಾ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಅರಣ್ಯದ ಬಳಿ ವಾಹನದಲ್ಲಿ ಬಂದ ದರೋಡೆಕೋರರನ್ನು ಬಂಧಿಸಲು ಪ್ರಯತ್ನಿಸಲಾಯಿತು. ಆದರೆ, ನಮ್ಮ ಮೇಲೆ ದಾಳಿ ನಡೆಸಲು ಮುಂದಾದರು. ಈ ವೇಳೆ ನಡೆದ ಪ್ರತಿ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಆಸ್ಪತ್ರೆಗೆ ಸಾಗಿಸುವಾಗ ಮರಣ ಹೊಂದಿದರು ಎಂದು ತಿಳಿಸಿದ್ದಾರೆ.
ಮೃತರಿಂದ ಎರಡು ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಾಕೇಶ್ ರೆಡ್ಡಿ ತಿಳಿಸಿದ್ದಾರೆ.