ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿಕ್ಕಾನ ಮುದಲಪ್ಪಾರ ಎಂಬಲ್ಲಿ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ಎಂಟರ ಹರೆಯದ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಬೋವಿಕ್ಕಾಣ ಮುದಲಪ್ಪಾರ ಅಪಾರ್ಟ್‍ಮೆಂಟ್ ಒಂದರಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಮುಮಡಕೈ ಸರ್ಕಾರಿ ಎಲ್‍ಪಿ ಶಾಲಾ ವಿದ್ಯಾರ್ಥಿಸಯ್ಯದ್ ಹೈದರಲಿ(8)ಗಾಯಾಳು. ಈತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಹೋದರನೊಂದಿಗೆ ಶಾಲೆಗೆ ನಡೆದುಹೋಗುತ್ತಿದ್ದಾಗ ಕುರುಚಲು ಪೊದೆಯೆಡೆ ಕುಳಿತಿದ್ದ ಕಾಡುಹಂದಿ ಏಕಾಏಕಿ ದಾಳಿ ನಡೆಸಿದೆ. ಬಾಲಕ ಬೊಬ್ಬಿಡುತ್ತಿದ್ದಂತೆ ಹಂದಿ ಪರಾರಿಯಾಗಿದೆ. ಕೃಷಿಗೆ ಹಾನಿಯೆಸಗುತ್ತಿರುವ ಕಾಡುಹಂದಿಗಳು, ಇದೀಗ ಶಾಲೆ, ಮದ್ರಸಾ ತರಗತಿಗೆ ತೆರಳುವ ವಿದ್ಯಾರ್ಥಿಗಳ ಮೇಲೂ ದಾಳಿ ನಡೆಸುತ್ತಿದ್ದು, ಈ ಪ್ರದೇಶದ ಜನರಲ್ಲಿ ಆತಂಕ ಮನೆಮಾಡಿದೆ.