ಕಾಸರಗೋಡು: ನವಕೇರಳ ಸಮಾವೇಶÀ ಅಂಗವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಚಿವರು ಅದ್ದೂರಿ ಯಾತ್ರೆ ಆರಂಭಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪೈವಳಿಕೆ ನಗರದಲ್ಲಿ ನವಕೇರಳ ಸಮಾವೇಶ ನಿನ್ನೆ ನಡೆಯಿತು. ಮಧ್ಯಾಹ್ನ 3.30ಕ್ಕೆ ಪೈವಳಿಕೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು.
ಮಂಜೇಶ್ವರಕ್ಕೆ ಆಗಮಿಸಿದ ಮುಖ್ಯಮಂತ್ರಿ ಹಾಗೂ ಸಚಿವರನ್ನು ಅಧಿಕಾರಿಗಳು ಉಡುಗೊರೆ ಚೀಲಗಳೊಂದಿಗೆ ಸ್ವಾಗತಿಸಿದರು. ಉಡುಗೊರೆ ಪ್ಯಾಕ್‍ಗಳಲ್ಲಿ ಗೋಡಂಬಿ ಮತ್ತು ಜೇನುತುಪ್ಪದಂತಹ ಆಹಾರಗಳನ್ನು ಸೇರಿಸಲಾಗಿದೆ. ಕಂದಾಯ ಸಚಿವ ಕೆ. ರಾಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವು ಡಿಸೆಂಬರ್ 23 ರಂದು ಸಂಜೆ 6 ಗಂಟೆಗೆ ತಿರುವನಂತಪುರದ ವಟ್ಟಿಯೂರ್ಕಾವ್‍ನಲ್ಲಿ ಮುಕ್ತಾಯಗೊಳ್ಳಲಿದೆ.