ಪೆರ್ಲ : ಕುಂಬಳೆ ಸನಿಹದ ಪೇರಾಲ್‍ಕಣ್ಣೂರು ಸರ್ಕಾರಿ ಕಿರಿಯ ಮಾದರಿ ಶಾಲೆಯಲ್ಲಿ ಜರುಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಸಂಸ್ಕøತ ಪ್ರಭಾಷಣ ಮತ್ತು ಕನ್ನಡ ಪ್ರಸಂಗಮ್ ಸ್ಪರ್ಧೆಯಲ್ಲಿ ವಿಸ್ಮಿತಾ, ಸಂಸ್ಕೃತ ಕವಿತಾ ರಚನೆ ಸ್ಪರ್ಧೆಯಲ್ಲಿ ತನ್ವಿ ಮತ್ತು ಕನ್ನಡ ಉಪನ್ಯಾಸಮ್ ಸ್ಪರ್ಧೆಯಲ್ಲಿ ಸುಶ್ಮಿತಾ 'ಎ'ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಿದ್ಯಾರ್ಥಿಗಳಾಗಿದ್ದಾರೆ.