ಕಾಸರಗೋಡು: ಜಿಲ್ಲಾ ಇನ್ಫರ್ಮೇಷನ್ ಆಫೀಸಿಗೆ ಗುತ್ತಿಗೆ ಆಧಾರದ ಮೇಲೆ ಡ್ರೋನ್ ಆಪರೇಟರ್‌ಗಳ ಪಾನಲ್ ರೂಪೀಕರಿಸಲು ಅರ್ಹತೆಯಿರುವ ವ್ಯಕ್ತಿಗಳು/ ಸಂಸ್ಥೆಗಳು/ ಸ್ಟಾರ್ಟ್‌ಅಪ್‌ಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹತೆಗಳು -1) ವ್ಯಕ್ತಿಗಳು: ಡ್ರೋನ್ ಕಾರ್ಯಾಚರಿಸಿ ಫೋಟೋ ಮತ್ತು ವೀಡಿಯೊ ಶೂಟಿಂಗ್ ನಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಅಥವಾ ಸಂಘಟನೆಯಿಂದ ಮೂರು ವರ್ಷಗಳಿಗಿಂತಲೂ ಕಡಿಮೆಯಿಲ್ಲದ ಕೆಲಸದ ಅನುಭವ.
2) ಸಂಘಟನೆಗಳು ಮತ್ತು ಸಂಸ್ಥೆಗಳು: ಇಂತಹ ಕೆಲಸವನ್ನು ಕೈಗೊಂಡು ನಡೆಸಿದ ಮೂರು ವರ್ಷಗಳ ಅನುಭವ. ಸುದ್ದಿ ಮಾಧ್ಯಮಕ್ಕಾಗಿ ಏರಿಯಲ್ ನ್ಯೂಸ್ ಕ್ಲಿಪ್‌ಗಳ ಚಿತ್ರೀಕರಣ ಮತ್ತು ಎಡಿಟಿಂಗ್ ಮಾಡಿದ ಅನುಭವಕ್ಕೆ ಆದ್ಯತೆ ನೀಡಲಾಗುತ್ತದೆ. ಅರ್ಜಿಯ ಜೊತೆ ಬಯೋಡಾಟಾ, ವಿದ್ಯಾರ್ಹತೆ, ಕೆಲಸದ ಅನುಭವ, ಅರ್ಧ ಗಂಟೆ ಚಿತ್ರೀಕರಣ ಮತ್ತು ಒಂದು ಗಂಟೆ ಚಿತ್ರೀಕರಣದ ದರಗಳ ವಿವರವಾದ ಪ್ರಸ್ತಾವನೆಯೊಂದಿಗೆ ಡಿಸೆಂಬರ್ 8 ರಂದು ಸಂಜೆ 5 ಗಂಟೆಯೊಳಗೆ ಕಲೆಕ್ಟರೇಟಿನ ಜಿಲ್ಲಾ ಇನ್ಫರ್ಮೇಷನ್ ಆಫೀಸ್ ಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ prd.kerala.gov.in ನಲ್ಲಿ ಲಭ್ಯವಿದೆ.