HEALTH TIPS

ಕಾಶ್ಮೀರ: ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ವಿದ್ಯುತ್‌ ಸಂಪರ್ಕ ಪಡೆದ ಗುರೆಜ್‌

            ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್‌ ಪ್ರದೇಶಕ್ಕೆ ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

              ಗುರೆಜ್‌ ಪ್ರದೇಶದ ಜನರು ಇದುವರೆಗೂ ವಿದ್ಯುತ್‌ಗಾಗಿ ಡಿಸೇಲ್‌ ಜನರೇಟರ್‌ ಬಳಸುತ್ತಿದ್ದರು.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಾಶ್ಮೀರ ವಿದ್ಯುತ್ ವಿತರಣಾ ನಿಗಮ ನಿಯಮಿತ (ಕೆಪಿಡಿಸಿಎಲ್) ಪೋಸ್ಟ್‌ ಹಂಚಿಕೊಂಡಿದೆ.

                ಸವಾಲಿನ ಭೂ ಪ್ರದೇಶಲ್ಲಿ ವಿದ್ಯುತ್‌ಗಾಗಿ ಡಿಸೇಲ್‌ ಜನರೇಟರ್‌ಗಳ ಅವಲಂಬಿತವಾಗಿದ್ದ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಿರುವುದು ಒಂದು ಮೈಲುಗಲ್ಲು ಹಾಗೂ ಈ ವಿಷಯವನ್ನು ಹಂಚಿಕೊಳ್ಳಲು ಸಂತೋಷವಾಗಿದೆ ಎಂದು ಹೇಳಿದೆ.

                  ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಾತನಾಡಿ, ವಿದ್ಯುತ್‌ಗಾಗಿ ತೊಂದರೆ ಎದುರಿಸುತ್ತಿದ್ದ ಗುರೆಜ್ ಪ್ರದೇಶವು ಇಂದು ವಿದ್ಯುತ್‌ ಸಂಪರ್ಕ ಪಡೆದಿದೆ. ಈ ಮೂಲಕ ವಿವಿಧ ಪಂಚಾಯತ್‌ಗಳ ಸುಮಾರು 1,500 ಗ್ರಾಹಕರಿಗೆ ಇದರಿಂದ ಪ್ರಯೋಜನವಾಗಲಿದೆ. ಇದೊಂದು ಐತಿಹಾಸಿಕ ಮೈಲುಗಲ್ಲು ಎಂದು ಭಾನುವಾರ ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries