ರಾಜಸ್ಥಾನ :ರಾಜಸ್ಥಾನದ ಅಲ್ವಾರ್ ನಿಂದ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ನಸ್ರುಲ್ಲಾನನ್ನು ಎರಡನೇ ಮದುವೆಯಾಗಿದ್ದ ಅಂಜು ಆರು ತಿಂಗಳ ಬಳಿಕ ವಾಘಾ ಗಡಿ ಮೂಲಕ ತವರಿಗೆ ಮರಳಿದ್ದಾರೆ.
ಪಾಕಿಸ್ತಾನದಲ್ಲಿ ನಸ್ರುಲ್ಲಾನನ್ನು ಮದುವೆಯಾಗಿ ಫಾತಿಮಾ ಆಗಿದ್ದ ಅಂಜು ತನ್ನ ಮಕ್ಕಳನ್ನು ಭೇಟಿಯಾಗಲು ಹಂಬಲಿಸುತ್ತಿದ್ದಳು. ಇದೀಗ ಭಾರತಕ್ಕೆ ಆಗಮಿಸಿದ್ದು ತನ್ನ ಎರಡೂ ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ಹೋಗ್ತಾಳೋ ಇಲ್ಲವೋ? ಈ ಬಗ್ಗೆ ಎರಡನೇ ಪತಿ ನಸ್ರುಲ್ಲಾ ದೊಡ್ಡ ವಿಷಯ ಬಹಿರಂಗಪಡಿಸಿದ್ದಾರೆ.
ಅಲ್ವಾರ್ ಜಿಲ್ಲೆಯ ಭಿವಾಡಿಯಲ್ಲಿ ನೆಲೆಸಿದ್ದ ಅಂಜು ಜುಲೈ 25ರಂದು ತನ್ನ 29 ವರ್ಷದ ಸ್ನೇಹಿತ ನಸ್ರುಲ್ಲಾಳನ್ನು ವಿವಾಹವಾಗಿದ್ದಳು. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಅಪ್ಪರ್ ದಿರ್ ಜಿಲ್ಲೆಯಲ್ಲಿ ಇವರು ನೆಲೆಸಿದ್ದಾರೆ. 2019ರಲ್ಲಿ ಇಬ್ಬರೂ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು. ಇದೀಗ 34 ವರ್ಷದ ಅಂಜು ಪಾಕಿಸ್ತಾನ ಸರ್ಕಾರದಿಂದ ಅನುಮೋದನೆ ಪಡೆದು ಮನೆಗೆ ಮರಳಿದ್ದಾರೆ. ಫಾತಿಮಾ ಅವರ ಪಾಕಿಸ್ತಾನಿ ಪತಿ ನಸ್ರುಲ್ಲಾ ಈಗಾಗಲೇ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಫಾತಿಮಾ ಮತ್ತೆ ಪಾಕಿಸ್ತಾನಕ್ಕೆ ಹಿಂತಿರುಗುತ್ತಾಳೆ ಎಂದು ಹೇಳಿದ್ದಾನೆ.
ಅಂಜುಗೆ 15 ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾರೆ. ಅಂಜು ಅವರ ಪತಿ ಅರವಿಂದ್ ಈಗ ಮಕ್ಕಳೊಂದಿಗೆ ಭಿವಾಡಿಯ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಈ ವರ್ಷದ ಜೂನ್‌ನಲ್ಲಿ ಅಂಜು ಭಿವಾಡಿಯಿಂದ ಜೈಪುರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದಳು ಎಂದು ಅರವಿಂದ್ ತಿಳಿಸಿದ್ದಾನೆ. ಆದರೆ ನಂತರ ಆತ ಪಾಕಿಸ್ತಾನದಲ್ಲಿ ಇದ್ದಾನೆ ಎಂಬ ಮಾಹಿತಿ ಮನೆಯವರಿಗೆ ಸಿಕ್ಕಿತ್ತು.