ನವದೆಹಲಿ :ಭಾರತವು ನೌಕಾಪಡೆಗಾಗಿ ತನ್ನ ಸ್ವದೇಶಿ ನಿರ್ಮಿತ 'ಹಡಗು ನಿರೋಧಕ ಕ್ಷಿಪಣಿ (ಆಯಂಟಿ-ಶಿಪ್ ಮಿಸೈಲ್)'ಯ ದ್ವಿತೀಯ ಪರೀಕ್ಷಾರ್ಥ ಪ್ರಯೋಗವನ್ನು ಮಂಗಳವಾರ ಯಶಸ್ವಿಯಾಗಿ ನಡೆಸಿದೆ. ಮೊದಲ ಪರೀಕ್ಷಾರ್ಥ ಪ್ರಯೋಗವನ್ನು ಕಳೆದ ವರ್ಷದ ಮೇ ತಿಂಗಳಲ್ಲಿ ನಡೆಸಲಾಗಿತ್ತು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯ ಸಹಭಾಗಿತ್ವದಲ್ಲಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಗಿದೆ.
X ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿರುವ ಭಾರತೀಯ ನೌಕಾಪಡೆಯು ಸೀ ಕಿಂಗ್ 42 ಬಿ ಹೆಲಿಕಾಪ್ಟರ್ ನಿಂದ ಕ್ಷಿಪಣಿ ಉಡ್ಡಯನದ ವೀಡಿಯೊವನ್ನೂ ಪೋಸ್ಟ್ ಮಾಡಿದೆ.
ಹೆಲಿಕಾಪ್ಟರ್ ಗಾಗಿ ದೇಶಿ ನಿರ್ಮಿತ ಲಾಂಚರ್ ಮತ್ತು ಮಾರ್ಗದರ್ಶಕ ವ್ಯವಸ್ಥೆ ಸೇರಿದಂತೆ ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕ್ಷಿಪಣಿಯು ಒಳಗೊಂಡಿದೆ.