ಬದಿಯಡ್ಕ: ಪೆರಡಾಲ ನವಜೀವನ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಕುಂಬಳೆ ಉಪಜಿಲ್ಲಾ ವಿಜ್ಞಾನೋತ್ಸವದಲ್ಲಿ ಅತಿಥೇಯ ನವಜೀವನ ಶಾಲೆಯು 631 ಅಂಕಗಳೊಂದಿಗೆ ಪ್ರಥಮಸ್ಥಾನದಲ್ಲಿ ಸಮಗ್ರ ಪ್ರಶಸ್ತಿಗೆ ಪಾತ್ರವಾಗಿದ್ದು, ಸೋಮವಾರ ವಿದ್ಯಾರ್ಥಿಗಳಿಂದ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ತಮ್ಮ ಟ್ರೋಫಿಗಳೊಂದಿಗೆ ಪಾಲ್ಗೊಂಡಿದ್ದರು. ಪ್ರಾಂಶುಪಾಲ ಮಾಧವನ್ ಭಟ್ಟತ್ತಿರಿ, ಮುಖ್ಯೋಪಾಧ್ಯಾಯಿನಿ ಮಿನಿ ಟೀಚರ್, ರಕ್ಷಕ ಶಿಕ್ಷಕ ಸಂಘ, ಮಾತೃಸಮಿತಿ, ಶಾಲಾ ಸಿಬ್ಬಂದಿ ವರ್ಗ, ಅಧ್ಯಾಪಕರುಗಳಾದ ಪ್ರಸಾದ್ ಕೆ, ನಾರಾಯಣ ಆಸ್ರ, ರಾಜೇಶ್ ಅಗಲ್ಪಾಡಿ, ನಿರಂಜನ ರೈ ಪೆರಡಾಲ, ಪ್ರಭಾವತಿ ಕೆದಿಲಾಯ ಪುಂಡೂರು, ನಟರಾಜ ಪಟ್ಟಾಜೆ, ಸಿಬ್ಬಂದಿಗಳಾದ ಗೋಪಾಲ, ನವೀನ, ಯಜ್ಞೇಶ, ಎನ್.ಸಿ.ಸಿ., ಎನ್.ಎಸ್.ಎಸ್., ಎಸ್.ಪಿ.ಸಿ., ರೆಡ್‍ಕ್ರೋಸ್, ಲಿಟ್ಲ್ ಕೈಟ್ಸ್, ಸ್ಕೌಟ್ ಮತ್ತು ಗೈಡ್ಸ್ ಘಟಕಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.