ಎರ್ನಾಕುಳಂ: ಅತ್ಯಾಚಾರ ಪ್ರಕರಣದಲ್ಲಿ ಕಾನೂನು ನೆರವು ಕೋರಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಹಿರಿಯ ಸರ್ಕಾರಿ ವಕೀಲ ಪಿಜಿ ಮನು ಅವರನ್ನು ಹೈಕೋರ್ಟ್ ವಜಾಗೊಳಿಸಿದೆ. ಅವರಿಂದ ರಾಜೀನಾಮೆ ಪತ್ರ ಬರೆದು ಸ್ವೀಕರಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ತಿಳಿಸಿದರು.
ಮಹಿಳೆಯ ದೂರಿನ ಆಧಾರದ ಮೇಲೆ ಅತ್ಯಾಚಾರ, ಮಹಿಳೆಗೆ ಅವಮಾನ ಮತ್ತು ಐಟಿ ಕಾಯ್ದೆಯ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಆಧರಿಸಿ ಚೋಟಾನಿಕರ ಪೋಲೀಸರು ವಕೀಲರ ವಿರುದ್ಧ ಮುಂದಿನ ಕ್ರಮ ಕೈಗೊಂಡಿದ್ದರು. ಪಿ.ಜಿ.ಮನು ಅವರನ್ನು ಪತ್ತೆ ಹಚ್ಚಿ ನೋಟಿಸ್ ಜಾರಿ ಮಾಡಿ ಹೇಳಿಕೆ ದಾಖಲಿಸಿಕೊಂಡು ಬಂಧನ ಸೇರಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.
2018 ರ ಅತ್ಯಾಚಾರ ಪ್ರಕರಣದಲ್ಲಿ ಕಾನೂನು ಸಹಾಯ ಕೋರಿ ಮಹಿಳೆ ಪಿಜಿ ಮನು ಅವರನ್ನು ಸಂಪರ್ಕಿಸಿದ್ದರು. ಮಹಿಳೆ ದೂರಿನ ಪ್ರಕಾರ, ಪ್ರಕರಣದಲ್ಲಿ ಗರಿಷ್ಠ ಕಾನೂನು ನೆರವು ನೀಡುವುದಾಗಿ ಹೇಳಿದ ವಕೀಲರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಅವರು ಅಕ್ಟೋಬರ್ 10, 2023 ರಂದು ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದರು. ದೂರಿನ ಪ್ರಕಾರ, ಮಹಿಳೆಯ ವೈಯಕ್ತಿಕ ದೃಶ್ಯಗಳನ್ನು ತನ್ನ ಮೊಬೈಲ್ ಪೋನ್ ನಲ್ಲಿ ಸೆರೆಹಿಡಿದ ನಂತರ ಆಕೆಗೆ ಬೆದರಿಕೆ ಹಾಕಿ ಮತ್ತೆ ಅತ್ಯಾಚಾರವೆಸಗಿದ್ದರು.