HEALTH TIPS

ಜಿಲ್ಲೆಯಲ್ಲಿ ನವಕೇರಳ ಯಾತ್ರೆ ಸಂಪನ್ನ-ಕಣ್ಣೂರು ಜಿಲ್ಲೆ ಪ್ರವೇಶಿಸಿದ ಮುಖ್ಯಮಂತ್ರಿ, ಸಚಿವರ ತಂಡ

 



                     ಕಾಸರಗೋಡು: ಎರಡು ದಿವಸಗಳ ಕಾಲ ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಮತ್ತು ಇಪ್ಪತ್ತು ಮಂದಿ ಸಚಿವರ ನೇತ್ರತ್ವದಲ್ಲಿ ನಡೆದ ನವ ಕೇರಳ ಸಮಾವೆಸ ಭಾನುವಾರ ಸಂಭ್ರಮದ ತೆರೆ ಕಂಡಿತು. ರಾಜ್ಯ ಸರ್ಕಾರದ ಸಂಪೂರ್ಣ ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಂದ ಭಾರೀ ಮನ್ನಣೆ ಲಭಿಸಿರುವುದಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶ್ಷೇಷಿಸಿದ್ದಾರೆ.   

               ಮಂಜೇಶ್ವರಂದ ಪೈವಳಿಕೆಯಲ್ಲಿ ನವಕೇರಳ ಯಾತ್ರೆಯ ರಾಜ್ಯಮಟ್ಟದ ುದ್ಘಾಟನೆಯ ನಂತರ  ಕಾಸರಗೋಡು, ಉದುಮ,ಕಾಞಂಗಾಡ್ ಮತ್ತು ತ್ರಿಕರಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ನವ ಕೇರಳ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರಿದ್ದರು. ರಾಜ್ಯ ಸರ್ಕಾರ ಕಳೆದ ಏಳು ವರ್ಷಗಳಲ್ಲಿ  ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೊಳಿಸಿದ ಅಭಿವೃದ್ಧಿ ಯೋಜನೆಗಳನ್ನು ಪ್ರತಿಯೊಬ್ಬ ಸಚಿವ ವಿವಿಧ ಕ್ಷೇತ್ರಗಳಲ್ಲಿ ಸಮಾವೇಶದಲ್ಲಿ ಹಂಚಿಕೊಂಡರು. ಪೈವಳಿಕೆಯಿಂದ ಆರಂಭಗೊಂಡು ತೃಕ್ಕರಿಪುರ ವಿಧಾನಸಭಾ ಕ್ಷೇತ್ರದ ಸಮಾವೇಶ ಕಾಳಿಕಡವ್ ಮೈದಾನದಲ್ಲಿ ನೆರವೇರಿತು.

              ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮಾರಂಭಉದ್ಘಾಟಿಸಿ ಮಾತನಾಡಿ,  ನವ ಕೇರಳವನ್ನು ರೂಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ತ್ರಿಕರಿಪುರ ಕ್ಷೇತ್ರದಲ್ಲಿ ಜ್ಞಾನ, ಆರ್ಥಿಕತೆ ಮತ್ತು ನಾವೀನ್ಯತೆಯಿಂದ ಕೂಡಿದ ಸಮಾಜವನ್ನು ನಿರ್ಮಿಸಲು ಸರ್ಕಾರ ಪಣತೊಟ್ಟಿರುವುದಾಗಿ ತಿಳಿಸಿದರು. ಕೃಷಿಯಲ್ಲಿ ಕಂಡುಕೊಳ್ಳಲಾಗಿರುವ ಸುಧಾರಣೆಗಳು ಕೇರಳವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವಂತೆ ಮಾಡಿದೆ. ಭೂಸುಧಾರಣಾ ಮಸೂದೆ ಮತ್ತು ಶಿಕ್ಷಣ ಸುಧಾರಣೆ ಮಹತ್ವದ ಸುಧಾರಣೆಗೆ ಕಾರಣವಾಗಿದೆ. ಸಾರ್ವಜನಿಕ ಶಿಕ್ಷಣದಲ್ಲೂ ಪ್ರಗತಿ ಕಾಣಲು ಸಾಧ್ಯವಾಗಿದೆ ಎಂದು ತಿಳಿಸಿದರು.

                             ಕಾಞಂಗಾಡು ಕ್ಷೇತ್ರ ಸಮಾವೇಶ:

              ಕಾಞಂಗಾಡು ದುರ್ಗಾ ಹೈಯರ್ ಸೆಕೆಂಡರಿ ಶಾಲಾ ಮೈದಾನದಲ್ಲಿ ನಡೆದ ಕಾಞಂಗಾಡು ವಿಧಾನಸಭಾ ಕ್ಷೇತ್ರ ಸಮಿತಿ ಸಮಾವೇಶವನ್ನು ಸಇಎಂ ಪಿಣರಾಯಿ ವಇಜಯನ್ ಉದ್ಘಾಟಿಸಿ ಮಾತನಾಡಿ, ಮಧ್ಯಮ ವರ್ಗದವರ ಆದಾಯದಲ್ಲಿ ಪ್ರಗತಿ ಕಂಡುಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಿದ ದೇಶಗಳಂತೆಯೇ ರಾಜ್ಯದ ಜನರ ಜೀವನಮಟ್ಟವನ್ನು ಉನ್ನತಿಗೇರಿಸುವುದು ಸರ್ಕಾರದ ಗುರಿಯಾಗಿದೆ.  ಈ ನಿಟ್ಟಿನಲ್ಲಿ ಸರ್ಕಾರ ಅಭಿವೃದ್ಧಿ ಚಟುವಟಿಕೆಗಳನ್ನು ಜಾರಿಗೊಳಿಸುತ್ತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಯಾವುದೇ ಕ್ರಮವನ್ನು ವಿಫಲಗೊಳಿಸಲಾಗುವುದು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶದಲ್ಲಿ ಇಂತಹ ವ್ಯವಸ್ಥೆಗೆ ಧಕ್ಕೆ ತಂದೊಡ್ಡುವವರ ಬಗ್ಗೆ ಜಾಗ್ರತೆ ಪಾಲಿಸಬೇಕು ಎಂದು ತಿಳಿಸಿದರು.  

              ಕಣ್ಣೂರು ಜಿಲ್ಲೆಯಲ್ಲಿ ಪರ್ಯಟನೆ ನಡೆಯಲಿದ್ದು, ಪಿಣರಾಯಿ ವಿಜಯನ್ ಹಾಗೂ 20ಮಂದಿ ಸಚಿವರನ್ನೊಳಗೊಂಡ ಬಸ್ ಕಾಳಿಕ್ಕಡವು ಮೂಲಕ  ಕಣ್ಣೂರು ಜಿಲ್ಲೆ ಪ್ರವೇಶಿಸಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries