ಸಮರಸ ಚಿತ್ರಸುದ್ದಿ: ಬದಿಯಡ್ಕ:ಪೆರಡಾಲ ನವಜೀವನ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿಪರಿಚಯ ಮೇಳ ಚೋಕ್ ನಿರ್ಮಾಣ ಸ್ಪರ್ಧೆಯಲ್ಲಿ ಕಿಳಿಂಗಾರು ಎ.ಎಲ್.ಪಿ ಶಾಲೆಯ ಒಂದನೇ ತರಗತಿಯ ವೈಷ್ಣವ್ ಭಟ್ ‘ಎ’ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ. ಇವನು ಶಿವಗಣೇಶ್ ಕುಂಟಿಕಾನ ಹಾಗೂ ಅಧ್ಯಾಪಿಕೆ ಸಹನಾ ದಂಪತಿಯ ಪುತ್ರನಾಗಿದ್ದಾನೆ.