ಕಾಸರಗೋಡು: ಕೇರಳ ಸರ್ಕಾರದ ಎರಡನೇ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವು ಜಿಲ್ಲೆಯಲ್ಲಿ ಪೌರಧ್ವನಿ ಆರಂಭಿಸಿದೆ. ಉದುಮ ಗ್ರಾ.ಪಂ. ಫಿಶರೀಸ್ ಎಲ್ ಪಿ ಶಾಲೆಯಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಗರಿಕ ಸಮಾಜದ ಹಕ್ಕುಗಳು ಮತ್ತು ಕರ್ತವ್ಯಗಳು, ವೈಜ್ಞಾನಿಕ ಅರಿವು, ಮುಕ್ತ ಚಿಂತನೆ, ಜಾತ್ಯತೀತತೆ, ಪ್ರಜಾಸತ್ತಾತ್ಮಕ ಪ್ರಜ್ಞೆ ಮತ್ತು ಸಾಂವಿಧಾನಿಕ ದೃಷ್ಟಿಕೋನಗಳನ್ನು ಅಂಚಿನಲ್ಲಿರುವ ಜನರಿಗೆ ತಲುಪಿಸುವುದು ಯೋಜನೆಯ ಗುರಿಯಾಗಿದೆ.
ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ ಉದ್ಘಾಟಿಸಿದರು. ಉದುಮ ಗ್ರಾಮ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜೈನಬಾ ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಾಕ್ಷರತಾ ಮಿಷನ್ ಸಹಾಯಕ ನಿರ್ದೇಶಕ ಸಂದೀಪ್ ಚಂದ್ರನ್ ಯೋಜನೆ ವಿವರಿಸಿದರು. ಪಂಚಾಯಿತಿ ಸದಸ್ಯರಾದ ಎನ್.ಚಂದ್ರನ್ ಶೆಮ್ತಾವಾತುಕ್ಕಲ್, ವಿನಯಕುಮಾರ್, ವಿ. ಕೆ.ಅಶೋಕನ್, ಶೈನಿಮೋಳ್, ನಬೀಸಾ ಪಕ್ಯಾರ, ಬಿಂದುಸುತನ್, ಕಸ್ತೂರಿ ಬಾಲನ್, ಮಾಜಿ ಸದಸ್ಯ ಶಂಭು ಬೇಕಲ್, ಸಾಕ್ಷರತಾ ಸಮಿತಿ ಸದಸ್ಯರಾದ ಕೆ.ವಿ.ರಾಘವನ್ ಮಾಸ್ತರ್, ಕೆ.ವಿಜಯನ್ ಮಾಸ್ತರ್, ಸಾಕ್ಷರತಾ ಸಮಿತಿ ಸಂಪನ್ಮೂಲ ವ್ಯಕ್ತಿ ಹಾಗೂ ಶಿಕ್ಷಕ ಸಿ.ಪಿ.ವಿ.ವಿನೋದ್ ಕುಮಾರ್ ಮಾತನಾಡಿದರು. ಸಾಕ್ಷರತಾ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು ಸ್ವಾಗತಿಸಿ, ಸಂಚಾಲಕಿ ಪಿ.ಎಂ.ಪ್ರಿಯಾ ವಂದಿಸಿದರು.
ಮಾದಕ ವಸ್ತು ಮತ್ತು ಸವಾಲುಗಳ ಕುರಿತು ಅಬಕಾರಿ ತಡೆ ಅಧಿಕಾರಿ ಎನ್.ರಘುನಾಥನ್, ಮಾಧ್ಯಮ ಮತ್ತು ಸಾರ್ವಜನಿಕ ಕುರಿತು ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್ ಹಾಗೂ ಸಾಮಾಜಿಕ ನ್ಯಾಯದ ಕುರಿತು ಜಿಲ್ಲಾ ಸಾಮಾಜಿಕ ನ್ಯಾಯಾಧಿಕಾರಿ ನೌಫಲ್ ತರಗತಿ ನಡೆಸಿದರು. ಸ್ಥಳೀಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಇಂದು ಸಂಜೆ ನಡೆಯುವ ಸಮಾರೋಪವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು.