ಉಡುಪಿ: ನಾಗಾಲ್ಯಾಂಡ್ ಮಾಜಿ ರಾಜ್ಯಪಾಲರಾದ ಪದ್ಮನಾಭ ಬಾಲಕೃಷ್ಣ ಆಚಾರ್ಯ (ಪಿ.ಬಿ.ಆಚಾರ್ಯ) ಶುಕ್ರವಾರ ಮುಂಬೈನ ನಿವಾಸದಲ್ಲಿ ನಿಧನರಾದರು
ಉಡುಪಿ: ನಾಗಾಲ್ಯಾಂಡ್ ಮಾಜಿ ರಾಜ್ಯಪಾಲರಾದ ಪದ್ಮನಾಭ ಬಾಲಕೃಷ್ಣ ಆಚಾರ್ಯ (ಪಿ.ಬಿ.ಆಚಾರ್ಯ) ಶುಕ್ರವಾರ ಮುಂಬೈನ ನಿವಾಸದಲ್ಲಿ ನಿಧನರಾದರು
ಮೂಲತಃ ಉಡುಪಿಯವರಾದ ಪಿ.ಬಿ.ಆಚಾರ್ಯ ಅವರಿಗೆ ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪದವಿ, ಕ್ರಿಶ್ಚಿಯನ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಶಿಕ್ಷಣ ಪಡೆದು ಮುಂಬೈನಲ್ಲಿ ನೆಲೆಸಿದ್ದರು.
ತ್ರಿಪುರಾ, ಅಸ್ಸಾಂ,ನಾಗಾಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶದ ಗವರ್ನರ್ ಆಗಿ ಪಿ.ಬಿ. ಆಚಾರ್ಯ ಸೇವೆ ಸಲ್ಲಿಸಿದ್ದರು.
ಎಬಿವಿಪಿ, ಆರ್‌ಎಸ್‌ಎಸ್‌ನಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಪಿ.ಬಿ.ಆಚಾರ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.
ಹುಟ್ಟೂರು ಉಡುಪಿ ಜತೆಗಿನ ನಂಟು ಉಳಿಸಿಕೊಂಡಿದ್ದ ಆಚಾರ್ಯರು ಉಡುಪಿಯ ಅಷ್ಠಮಠಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು. ಮಾಹೆ ವಿಶ್ವವಿದ್ಯಾಲಯದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.