ಬದಿಯಡ್ಕ : ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿ ಕಾಸರಗೋಡು ಇದರ ಮಕ್ಕಳ ಮೇಳ ವತಿಯಿಂದ ಬಬ್ರುವಾಹನ ಯಕ್ಷಗಾನ ಕಾರ್ಯಕ್ರಮ ಶಾಲಾ ತಪೆÇೀವನ ಸಭಾಭವನದಲ್ಲಿ ಜರುಗಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹಾಗೂ ಕೇರಳ ರಾಜ್ಯ ಚಿನ್ಮಯ್ ಮಿಷನ್ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಯಕ್ಷಗಾನ ಬಯಲಾಟಗಳಿಂದ ರಾಮಾಯಣ, ಮಹಾಭಾರತದಂತಹ ಪೌರಾಣಿಕ ಕತೆಗಳು ಜನಸಾಮಾನ್ಯರಿಗೂ ಸುಲಭವಾಗಿ ಪರಿಚಯವಾಗುವಂತಾಗಿದೆ. ಯಕ್ಷಗಾನದ ಮೂಲಕ ಪ್ರಸ್ತುತಪಡಿಸುವ ಭಾಗಗಳು ಅತ್ಯಂತ ಸರಳ ಹಾಗೂ ಅರ್ಥೈಸಿಕೊಳ್ಳಲೂ ಸುಲಭ. ಯಕ್ಷಗಾನದ ಬಗ್ಗೆ ಮಕ್ಕಳು ಹೆಚ್ಚು ಆಸಕ್ತರಾಗಬೇಕು ಎಂದು ತಿಳಿಸಿದರು.
ಕೇರಳ ರಾಜ್ಯ ಚಿನ್ಮಯ್ ಮಿಷನ್ ಮುಖ್ಯಸ್ಥರಾದ ಸ್ವಾಮಿ ವಿವಿಕ್ತಾನಂದ ಸರಸ್ವತಿ ಆಶೀರ್ವಚನ ನೀಡಿ, ಪೌರಾಣಿಕ ಕತೆಗಳನ್ನು ಸಉಲಭವಾಗಿ ಮನದಟ್ಟುಮಾಡಿಕೊಲ್ಳಲು ಯಕ್ಷಗಾನದಂತಹ ಕಲೆ ಹೆಚ್ಚು ಸಹಕಾರಿ ಎಂದು ತಿಳಿಸಿದರು. ಡಾ. ರಮಾನಂದ ಬನಾರಿ ಮುಖ್ಯ ಅತಿಥಿಯಾಗಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮಾನಸ, ಅಧ್ಯಾಪಕರು, ಸಿಬ್ಬಂದಿ ಮತ್ತು ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. ಶಾಲೆಯ ಮೇಲ್ವಿಚಾರಕ ಪ್ರಶಾಂತ್ ಬೆಳಿಂಜ ಸ್ವಾಗತಿಸಿದರು. ವಿದ್ಯಾರ್ಥಿನಿ ಸಮಾನ್ವಿತ ಕಾರ್ಯಕ್ರಮ ನಿರೂಪಿಸಿದಳು. ನಂತರ ಯಕ್ಷಗಾನ ಬಯಲಾಟ ಜರುಗಿತು.