ಲಂಡನ್: ಶಿಕ್ಷಣದಲ್ಲಿ ವಿದ್ಯಾರ್ಥಿ ಕೇಂದ್ರಿತ ಕ್ರಮಗಳನ್ನು ಅಳವಡಿಸಿಕೊಂಡಿರುವುದಕ್ಕಾಗಿ ಗುಜರಾತ್‌ನ ಅಹಮದಾಬಾದ್‌ನ ಖಾಸಗಿ ಅಂತರರಾಷ್ಟ್ರೀಯ 'ದ ರಿವರ್‌ಸೈಡ್ ಸ್ಕೂಲ್', 2023ನೇ ಸಾಲಿಗೆ ವಿಶ್ವದ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಭಾಜನವಾಗಿದೆ.
ಲಂಡನ್: ಶಿಕ್ಷಣದಲ್ಲಿ ವಿದ್ಯಾರ್ಥಿ ಕೇಂದ್ರಿತ ಕ್ರಮಗಳನ್ನು ಅಳವಡಿಸಿಕೊಂಡಿರುವುದಕ್ಕಾಗಿ ಗುಜರಾತ್‌ನ ಅಹಮದಾಬಾದ್‌ನ ಖಾಸಗಿ ಅಂತರರಾಷ್ಟ್ರೀಯ 'ದ ರಿವರ್‌ಸೈಡ್ ಸ್ಕೂಲ್', 2023ನೇ ಸಾಲಿಗೆ ವಿಶ್ವದ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಭಾಜನವಾಗಿದೆ.
ನಾವೀನ್ಯತೆ ವಿಭಾಗದಲ್ಲಿ ಈ ಶಾಲೆಯು ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆಯಾಗಿದೆ.
'ಭಾರತದ 'ದ ರಿವರ್‌ಸೈಡ್ ಸ್ಕೂಲ್'ಗೆ ಹಾರ್ದಿಕ ಅಭಿನಂದನೆಗಳು. ಜಗತ್ತಿನ ಶಿಕ್ಷಣ ಪರಿಣತರು, ಒಂದು ಮಾದರಿಯಾಗಿ ನಿಮ್ಮ ಶಾಲೆಯನ್ನು ಗಮನಿಸಬಹುದು' ಎಂದು ಟಿ4 ಎಜುಕೇಶನ್ ಸಂಸ್ಥೆ ಮತ್ತು ಬಹುಮಾನದ ಸ್ಥಾಪಕರಾದ ವಿಕಾಸ್ ಪೋಟ ಪ್ರತಿಕ್ರಿಯಿಸಿದ್ದಾರೆ.
'ಇಂದಿನ ಬಹುತೇಕ ಸವಾಲುಗಳಿಗೆ ಉತ್ತರವಾಗಿಯೂ ಸರ್ಕಾರ ನಿಮ್ಮ ಸ್ಕೂಲ್‌ನ ಸಾಧನೆಯನ್ನು ಗಮನಿಸಬಹುದು. ನಿಮ್ಮ ನಾಯಕತ್ವ, ದೂರದೃಷ್ಟಿ, ನಿಮ್ಮ ಶಾಲೆಯಲ್ಲಿನ ಸಂಸ್ಕೃತಿಯಿಂದ ಇದು ಸಾಧ್ಯವಾಗಿದೆ' ಎಂದು ಅವರು ಶ್ಲಾಘಿಸಿದ್ದಾರೆ.