ಉಪ್ಪಳ: ಉರ್ದು ಸಾಹಿತ್ಯ ಮತ್ತು ಮಾಧ್ಯಮ ಕಾರ್ಯಕರ್ತರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಗಜಲ್ ಮತ್ತು ಕವ್ವಾಲಿ ಉರ್ದು ಸಂಸ್ಕøತಿಯ ಸುಂದರ ಅಭಿವ್ಯಕ್ತಿಗಳು ಮತ್ತು ಕಾಸರಗೋಡಲ್ಲಿ ಉರ್ದು ಭಾಷೆಯ ಜನಪ್ರಿಯತೆ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ಹೇಳಿದರು.
ಅವರು ಕಣ್ಣೂರು ವಿಶ್ವವಿದ್ಯಾನಿಲಯ ಬಹುಭಾಷಾ ಕೇಂದ್ರ, ಕೆ.ಡಿ.ಎಂ.ಎ. ಕಾಸರಗೋಡು, ಹನಫಿ ವೆಲ್ಫೇರ್ ಸೊಸೈಟಿ ಉಪ್ಪಳ ಸಂಯುಕ್ತವಾಗಿ ಆಯೋಜಿಸಿದ್ದ ‘ಉರ್ದು ದಿನಾಚರಣೆ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಎ.ಅಶೋಕನ್ ಅಧ್ಯಕ್ಷ ತೆ ವಹಿಸಿದ್ದರು. ಶಾಸಕ ಎ.ಕೆ.ಎಂ.ಅಶ್ರಫ್ ಮುಖ್ಯ ಅತಿಥಿಯಾಗಿದ್ದರು. ಸಮಾರಂಭದಲ್ಲಿ ಡಾ.ಆರ್.ಐ. ರಿಯಾಜ್ ಅಹಮದ್ ಅವರಿಗೆ ಅಲ್ಲಮ ಇಕ್ಬಾಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಎ.ಎಂ.ಶ್ರೀಧರನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಸರ್ ಚುಳ್ಳಿಕ್ಕರೆ, ಅಬ್ದುಲ್ ರಶೀದ್ ಉಸ್ಮಾನ್, ಅಬ್ದುಲ್ ಕರೀಂ, ಹಾಜಿ ನಿಸಾರ್ ಅಹ್ಮದ್, ಡಾ.ಹಸನ್ ಶಿಹಾಬ್ ಹುದವಿ, ಶೇಖ್ ಶಾಬಾನ್ ಸಾಹಿಬ್, ಕೆ.ವಿ.ಕುಮಾರನ್, ರವೀಂದ್ರನ್ ಪಾಡಿ, ಟಿ.ಎಂ.ಖುರೈಶ್, ಮುಹಮ್ಮದ್ ಆಸಿಫ್ ಮತ್ತಿತರರು ಮಾತನಾಡಿದರು. ನಂತರ ನಡೆದ ವಿಚಾರ ಸಂಕಿರಣದಲ್ಲಿ ಕುಂಞÂ್ಞ ಕಣ್ಣನ್ ಕಾಕ್ಕಾನತ್ (ಉರ್ದು ಮತ್ತು ಭಾರತೀಯ ಉಪಖಂಡದ ರಾಜಕೀಯ), ಅಝೀಮ್ ಮಣಿಮುಂಡೆ (ಕಾಸರಗೋಡಿನ ಹನಫಿಗಳು ಮತ್ತು ಉರ್ದು ಭಾಷೆ- ಸಂಸ್ಕøತಿ), ಇ. ಅಬ್ದುಲ್ ನಿಸಾರ್ (ಉರ್ದು ಮತ್ತು ಭಾರತೀಯ ರಾಷ್ಟ್ರೀಯತೆ) ಮತ್ತು ಇಸ್ಮತ್ ಪಜೀರ್ (ಅವಿಭಜಿತ ಕರ್ನಾಟಕ ಮತ್ತು ದಖಿನಿ ಉರ್ದು ಮತ್ತು ಬ್ಯಾರಿಭಾಷೆ) ಮಾತನಾಡಿದರು. ನಿಸಾರ್ ಪೆರುವಾಡ್ ಸಂಯೋಜಕರಾಗಿದ್ದರು.