ಕಾಸರಗೋಡು: ವಿದ್ಯುತ್ ದರ ಏರಿಸುವ ಮೂಲಕ ಜನಸಾಮಾನ್ಯರ ಜೀವನ ಮೂರಾಬಟ್ಟೆ ಮಾಡುವ ಕೇರಳದ ಎಡರಂಗ ಸರ್ಕಾರದ ಕ್ರಮ ಖಂಡನೀಯ ಎಂದು ಕೆಪಿಸಿಸಿ ಸದಸ್ಯ ಪಿ.ಕೆಪಿಸಿಸಿ ಸದಸ್ಯ ಪಿ. ಎ. ಅಶ್ರಫ್ ಅಲಿ ತಿಳಿಸಿದ್ದಾರೆ.
ಅವರು ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರದ ಧೋರಣೆ ಖಂಡಿಸಿ, ಕಾಂಗ್ರೆಸ್ ಕಾಸರಗೋಡು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಚೆರ್ಕಳ ವಿದ್ಯುತ್ ಉಪವಿಭಾಗೀಯ ಕಚೇರಿ ಎದುರು ಸೋಮವಾರ ನಡೆಸಲಾದ ಧರಣಿ ಉದ್ಘಾಟಿಸಿ ಮಾತನಾಡಿದರು.
ವಿದ್ಯುತ್ ಶುಲ್ಕ ಹೆಚ್ಚಿಸುವ ಮೂಲಕ ಸರ್ಕಾರ ಜನರನ್ನು ವಂಚಿಸಿದೆ. ಪ್ರಬುದ್ಧ ಆಡಳಿತದಿಂದ ರಾಜ್ಯ ಆರ್ಥಿಕ ದೀವಾಳಿಯತ್ತ ಸಾಗಿದ್ದು, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಜನ ಸಾಮಾನ್ಯರನ್ನು ಎಲ್ಲ ರೀತಿಯಲ್ಲೂ ಸುಲಿಗೆ ನಡೆಸುತ್ತಿದೆ. ಇದರಿಂದ ಜನರ ಜೀವನ ಅಯೋಮಯವಾಗಿದೆ ಎಂದು ತಿಳಿಸಿದರು. ಕಾಸರಗೋಡು ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ರಾಜೀವ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಿ.ವಿ.ಜೇಮ್ಸ್, ಮನಾಫ್ ನುಳ್ಳಿಪಾಡಿ, ಜವಾದ್ ಪುತ್ತೂರು, ಕಾದರ್ ಮಾನ್ಯ, ಕೆ.ವಾರಿಜಾಕ್ಷನ್, ಖಾನ್ ಪೈಕ, ಆನಂದ ಮವ್ವಾರ್, ಕಟ್ಟುಕೊಚ್ಚಿ ಕುಞÂಕೃಷ್ಣನ್ ನಾಯರ್, ಮೊಯ್ದೀನ್ ಕುಞÂ ಪೈಕ, ಬಾಲಕೃಷ್ಣನ್ ಪರಿಂಗಾತೋಟ್, ಅಬ್ದುಲ್ ರಝಾಕ್, ಎ.ಶಾಹುಲ್ ಹಮೀದ್, ಮೊಯ್ದು ಹಾಜಿ, ಕಾರಡ್ಕ ಬ್ಲಾಕ್ ಸಮಿತಿ ಅಧ್ಯಕ್ಷ ವಿ.ಗೋಪ ಕುಮಾರ್ ಸ್ವಾಗತಿಸಿದರು. ಚೆಂಗಳ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ. .ಎ. ಇಸ್ಮಾಯಿಲ್ ವಂದಿಸಿದರು.