ನವದೆಹಲಿ: ಪ್ರತಿಷ್ಠಿತ ರೇಮಂಡ್ ಕಂಪನಿಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಹಾಗೂ ಅವರ ಪತ್ನಿ ನವಾಜ್ ಅವರು, ದೀರ್ಘಕಾಲ ದಾಂಪತ್ಯದ ನಂತರ ಬೇರ್ಪಟ್ಟಿದ್ದಾರೆ.
ನವದೆಹಲಿ: ಪ್ರತಿಷ್ಠಿತ ರೇಮಂಡ್ ಕಂಪನಿಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಹಾಗೂ ಅವರ ಪತ್ನಿ ನವಾಜ್ ಅವರು, ದೀರ್ಘಕಾಲ ದಾಂಪತ್ಯದ ನಂತರ ಬೇರ್ಪಟ್ಟಿದ್ದಾರೆ.
ಗೌತಮ್ ಅವರು ಸೋಮವಾರ ಈ ಕುರಿತು ಅಧಿಕೃತವಾಗಿ ಘೋಷಿಸಿದ್ದು, ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಮದುವೆಗೂ ಮೊದಲು ಈ ಇಬ್ಬರಿಗೂ ಪರಸ್ಪರ ಪರಿಚಯವಿತ್ತು. ಈ ಸ್ನೇಹವು ಪ್ರೀತಿಗೆ ತಿರುಗಿತ್ತು. ಎಂಟು ವರ್ಷಗಳ ಪ್ರೀತಿಯ ಬಳಿಕ 1999ರಲ್ಲಿ ನವಾಜ್ ಅವರೊಟ್ಟಿಗೆ ಗೌತಮ್ ವೈವಾಹಿಕ ಜೀವನಕ್ಕೆ ಅಡಿ ಇಟ್ಟಿದ್ದರು.
'ಇಂದಿನ ದೀಪಾವಳಿಯು ಈ ಹಿಂದೆ ಇದ್ದಂತೆ ಇರುವುದಿಲ್ಲ. ನಾವಿಬ್ಬರು ಬೇರೆಯಾಗುತ್ತಿದ್ದು, ಭಿನ್ನ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದೇವೆ' ಎಂದು ಗೌತಮ್ 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.
'ದಾಂಪತ್ಯ ಬದುಕಿನಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದೇವೆ. ಪರಸ್ಪರ ಶಕ್ತಿಯುತ ಪೋಷಕರಾಗಿ ಬೆಳೆದಿದ್ದೇವೆ. ಬದ್ಧತೆ, ಸಂಕಲ್ಪ ಹಾಗೂ ನಂಬಿಕೆಯೊಂದಿಗೆ ಸಾಗಿದ್ದೇವೆ' ಎಂದು ಹೇಳಿದ್ದಾರೆ.
ವಿಚ್ಛೇದನ, ಹಾಗೂ ಇಬ್ಬರು ಮಕ್ಕಳಾದ ನಿಹಾರಿಕಾ ಹಾಗೂ ನಿಸಾ ಯಾರ ಸುಪರ್ದಿಯಲ್ಲಿ ಇರುತ್ತಾರೆ ಎಂಬ ಬಗ್ಗೆ ಅವರು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ.