ಬದಿಯಡ್ಕ: ಅಗಲ್ಪಾಡಿ ಶಾಲೆಯಲ್ಲಿ ಜರಗಿದ ಜಿಲ್ಲಾಮಟ್ಟದ ಸೀನಿಯರ್ ಥ್ರೋಬಾಲ್ ಚಾಂಪಿಯನ್ ಶಿಪ್‍ನಲ್ಲಿ ವಿವೇಕಾನಂದ ಬಾಯಾರು ಪುರುಷರ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಪಂದ್ಯಾಟವನ್ನು ಶಾಲಾ ಪ್ರಾಂಶುಪಾಲ ಸತೀಶ್ ವೈ. ಉದ್ಘಾಟಿಸಿದರು. ಜಿಲ್ಲಾ ಥ್ರೋ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಕೆ. ಸೂರ್ಯ ಭಟ್ ಎಡನೀರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಗಿರೀಶ್, ಶಶಿಕಾಂತ್ ಜಿ. ಆರ್, ಅಬ್ದುಲ್ ರಹಿಮಾನ್ ಶುಭಹಾರೈಸಿದರು. ಸಂತೋಷ್ ಸ್ವಾಗತಿಸಿದರು.