'
ಕಾಸರಗೋಡು: ವಿದ್ಯಾರ್ಥಿಗಳಿಗೆ ಕೃಷಿ ಸಂಸ್ಕøತಿಯ ಪಾಠವನ್ನು ತಿಳಿಸುವ ಉದ್ದೇಶದಿಂದ ಬಾನಂ ಸರ್ಕಾರಿ ಪ್ರೌಢಶಾಲೆಯ ವಿವಿಧ ಕ್ಲಬ್ ಗಳ ನೇತೃತ್ವದಲ್ಲಿ ಭತ್ತದ ಕೊಯ್ಲಿನ ಅಂಗವಾಗಿ ಸುಗ್ಗಿ ಹಬ್ಬ ನಡೆಯಿತು.
ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್ ಕೊಯ್ಲು ಉತ್ಸವಕ್ಕೆ ಚಾಲನೆ ನಿಡಿದರು. ಮುಖ್ಯಶಿಕ್ಷಕಿ ಸಿ.ಕೋಮಲವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪಿ.ಮನೋಜ್ ಕುಮಾರ್, ಮದರ್ ಪಿ.ಟಿ.ಎ.ಅಧ್ಯಕ್ಷೆ ವಿ.ಎನ್.ಮಿನಿ, ಎಸ್.ಎಂ.ಸಿ ಅಧ್ಯಕ್ಷ ಬಾನಂ ಕೃಷ್ಣನ್, ಎಡಿಎಸ್ ಅಧ್ಯಕ್ಷೆ ವಿ.ಓಮನ, ಹಸಿರು ಕ್ರಿಯಾ ಸೇನೆ ಸಂಯೋಜಕ ಸಂಜಯ್ ಮಣೈಲ್, ಅನೂಪ್ ಪೆರಿಯಾಲ್, ಎಂ.ಲತಾ, ನಿಶಾಂತ್ ರಾಜನ್, ಕೆ.ಭಾಗ್ಯೇಶ್ ಉಪಸ್ಥಿತರಿದ್ದರು. ಖಾಸಗಿಯವರ ಮೂವತ್ತು ಸೆಂಟ್ಸ್ ಜಮೀನಿನಲ್ಲಿ ಭತ್ತದ ಕೃಷಿ ನಡೆಸಲಾಗಿತ್ತು.