ಮಧೂರು: ಕೇರಳ ಸರ್ಕಾರವು ರಾಜ್ಯವನ್ನು ಕೇಂದ್ರೀಕರಿಸಿ ಕಾಸರಗೋಡಿನಲ್ಲಿ ಪ್ರತ್ಯೇಕ ಅಸ್ತಿತ್ವವುಳ್ಳ `ಕೇರಳ ಕನ್ನಡ ಅಕಾಡೆಮಿ'ಯನ್ನು ಸ್ಥಾಪಿಸಬೇಕು ಹಾಗು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಮಗ್ರವಾದ ಸಾಂಸ್ಕøತಿಕ ಯೋಜನೆಯೊಂದನ್ನು ಸಿದ್ಧಪಡಿಸಿ ಮುಂದಿನ ವಾರ್ಷಿಕ ಮುಂಗಡಪತ್ರದಲ್ಲಿ ಕನ್ನಡ ನಿಧಿಯೊಂದನ್ನು ಸ್ಥಾಪಿಸಬೇಕೆಂದು ಕಾಸರಗೋಡು ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಕೇರಳ ಸÀರ್ಕಾರವನ್ನು ಆಗ್ರಹಿಸಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮಲಯಾಳೀಕರಣದ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕøತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇಂತಹ ಸಂದಭರ್Àದಲ್ಲಿ ಕನ್ನಡ ಭಾಷೆ, ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಕಾಸರಗೋಡಿನಾದ್ಯಂತ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳಾಗಬೇಕೆಂದರು.
ಕಾರ್ಯಕ್ರಮದಲ್ಲಿ ಶ್ರೀ ವೆಂಕಟ್ರಮಣ ಕೃಪಾಪೆÇೀಷಿತ ಯಕ್ಷಗಾನ ಕಲಾಸಂಘ ಕಾಸರಗೋಡು ಇದರ ವ್ಯವಸ್ಥಾಪಕ ಕೆ.ಎನ್.ವೆಂಕಟ್ರಮಣ ಹೊಳ್ಳ ಅವರು ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರು ಶುಭÀಹಾರೈಸಿದರು. ಕಾರ್ಯಕ್ರಮದಲ್ಲಿ ಅನಿಲ್, ಜಗದೀಶ್ ಕೂಡ್ಲು, ದಯಾನಂದ ಬೆಳ್ಳೂರಡ್ಕ, ಯೋಗೀಶ್ ಕೋಟೆಕಣಿ, ಕುಶಲ ಕುಮಾರ್, ಶ್ರೀಕಾಂತ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದಭರ್Àದಲ್ಲಿ ಕನ್ನಡ ಪ್ರತಿಜ್ಞೆ ಕೈಗೊಳ್ಳಲಾಯಿತು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗುರುಪ್ರಸಾದ್ ಕೋಟೆಕಣಿ ವಂದಿಸಿದರು. ಇದೇ ಸಂದಭರ್Àದಲ್ಲಿ ಕೆ.ಎನ್.ವೆಂಕಟ್ರಮಣ ಹೊಳ್ಳ ಅವರಿಗೆ ಕೇರಳ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗು ಗುರುಪ್ರಸಾದ್ ಕೋಟೆಕಣಿ ಅವರಿಗೆ ಕನ್ನಡ ಗ್ರಾಮೋತ್ಸವ ಪ್ರಶಸ್ತಿಯನ್ನು ಘೋಷಿಸಲಾಯಿತು. ಪ್ರಶಸ್ತಿಯನ್ನು ನ.4 ರಂದು ಕನ್ನಡ ಗ್ರಾಮದಲ್ಲಿ ನಡೆಯುವ ಕಾಸರಗೋಡು ಕನ್ನಡ ಗ್ರಾಮೋತ್ಸವ ಸಂದಭರ್Àದಲ್ಲಿ ಪ್ರದಾನ ಮಾಡಲಾಗುವುದು.