ಕೊಚ್ಚಿ: ಬಾಲಿವುಡ್ ಗಾಯಕಿ ನಿಕಿತಾ ಗಾಂಧಿ ನೇತೃತ್ವದ ಸಂಗೀತ ರಾತ್ರಿ ಕಾರ್ಯಕ್ರಮಕ್ಕೆ ಕುಸಾಟ್ ಅಧಿಕಾರಿಗಳು ಪೋಲೀಸರಿಂದ ಅನುಮತಿ ಪಡೆದಿಲ್ಲ ಎಂದು ಜಿಲ್ಲಾ ಪೆÇಲೀಸ್ ಆಯುಕ್ತ ಪಿ.ಕೆ.ಸುದರ್ಶನ್ ಹೇಳಿದ್ದಾರೆ. ಯಾವುದೇ ಲಿಖಿತ ಸೂಚನೆ ನೀಡಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ.
ಆದರೆ ಮ್ಯೂಸಿಕ್ ನೈಟ್ ಕುರಿತು ಪೋಲೀಸರಿಗೆ ಮೌಖಿಕವಾಗಿ ತಿಳಿಸಲಾಗಿದೆ ಎಂದು ಕುಸಾಟ್ ವಿಸಿ ಪಿ.ಜಿ.ಶಂಕರನ್ ವಿವರಣೆ ನೀಡಿರುವರು. ಅಲ್ಲಿ ಆರು ಪೋಲೀಸರು ಇದ್ದರು. ಇದಕ್ಕೂ ಮುನ್ನ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.
ಕಾರ್ಯಕ್ರಮ ನೋಡಲು ಜನ ಮುಗಿಬಿದ್ದರು. ಒಳಗೆ ಹೋಗಲು ಏಕಾಏಕಿ ತಳ್ಳಲಾಯಿತು ಎಂದು ವಿಸಿ ಹೇಳಿದರು. ಕಾರ್ಯಕ್ರಮದ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳನ್ನು ಸಭಾಂಗಣಕ್ಕೆ ಕರೆದೊಯ್ಯುವಲ್ಲಿ ಲೋಪವಾಗಿದೆ ಎಂದು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಕಾರ್ಯಕ್ರಮ ಶುರುವಾಗಲು ಸ್ವಲ್ಪ ತಡವಾಯಿತು. ಇದರಿಂದ ಮಕ್ಕಳನ್ನು ಒಳಕಳಿಸಲು ವಿಳಂಬವಾಗಿದೆ. ನಂತರ ಏಳು ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತದೆ ಎಂದು ತಿಳಿಸಿದಾಗ ಹೊರಗಿನವರೂ ನುಗ್ಗಿದರು. ಮೆಟ್ಟಿಲುಗಳ ಮೇಲೆ ನಿಂತಿದ್ದವರು ಕೆಳಗೆ ಬಿದ್ದರು. ಸಭಾಂಗಣದ ಹಿಂಭಾಗದ ಮೆಟ್ಟಿಲುಗಳು ಕಡಿದಾದವು ಎಂದು ಡಾ. ಪಿ.ಜಿ.ಶಂಕರನ್ ಹೇಳಿದರು. ಒಂದೇ ಗೇಟ್ ಇದ್ದ ಕಾರಣ ಅನಾಹುತ ಸಂಭವಿಸಿತು ಎಂದು ಅವರು ಹೇಳಿದರು.
ಅಪಘಾತಕ್ಕೆ ಹೊರಗಿನವರು ಆಕಸ್ಮಿಕವಾಗಿ ಪ್ರವೇಶಿಸಿದ್ದೇ ಕಾರಣ ಎಂದು ಕುಸಾಟ್ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕಿ ಬೇಬಿ ತಿಳಿಸಿದ್ದಾರೆ. ಇದು ಸುಮಾರು 2000 ಜನರಿಗೆ ಅವಕಾಶ ಕಲ್ಪಿಸುವ ನಿರೀಕ್ಷೆಯಿತ್ತು. ಆದರೆ ಇತರ ವಿಭಾಗಗಳ ವಿದ್ಯಾರ್ಥಿಗಳು ಮತ್ತು ಹೊರಗಿನವರ ತಳ್ಳುವಿಕೆಯು ಭಾರಿ ರಶ್ ಅನ್ನು ಉಂಟುಮಾಡಿತು. ಮಳೆ ಬರುತ್ತಿತ್ತು ಎಂದ ಅವರು, ಇದ್ದಕ್ಕಿದ್ದಂತೆ ಎಲ್ಲರೂ ಸಭಾಂಗಣಕ್ಕೆ ನುಗ್ಗಿದರು ಎಂದು ಪ್ರತ್ಯಕ್ಷ ದರ್ಶನದ ವಿವರ ನೀಡಿದ್ದಾರೆ.