HEALTH TIPS

ಫ್ರಿಡ್ಜ್‌ನಲ್ಲಿ ಎರಡು ದಿನಕ್ಕಿಂತ ಅಧಿಕ ಇಟ್ಟ ಆಹಾರವಸ್ತು ಸೇವಿಸಬಹುದೇ?

 ಇತ್ತೀಚಿನ ಬ್ಯುಸಿ ಲೈಫ್ ನಲ್ಲಿ ನಮಗೆ ತಾಜಾ ಆಹಾರವನ್ನು ತಯಾರಿಸಿಕೊಂಡು ತಿನ್ನಲು ಪುರುಸೊತ್ತು ಇಲ್ಲ. ಅದಕ್ಕಾಗಿ ಸಮಯ ಸಿಕ್ಕಾಗ ಆಹಾರವನ್ನ ತಯಾರಿಸಿಕೊಂಡು ಫ್ರಿಡ್ಜನಲ್ಲಿ ಇಟ್ಟು ಅದನ್ನೇ ವಾರಾನುಗಟ್ಟಲೆ ಸೇವಿಸುತ್ತೇವೆ ಅಥವಾ ಪ್ಯಾಕೆಟ್ ಆಹಾರವನ್ನು ಸೇವಿಸುತ್ತೇವೆ. ಇದು ಒಂಥರ ಸ್ಲೋ ಪಾಯಿಸನ್ ಇದ್ದ ಹಾಗೆ ನಮ್ಮ ದೇಹ ದಿನದಿಂದ ದಿನಕ್ಕೆ ಅನಾರೋಗ್ಯಕ್ಕೆ ಒಳಗಾಗುತ್ತಾ ಹೋಗುತ್ತದೆ ಇದು ನಮ್ಮ ಅರಿವಿಗೆ ಬರುವುದಿಲ್ಲ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೆಫ್ರಿಜರೇಟರ್ ಗಳನ್ನು ತಂಗಳು ಪೆಟ್ಟಿಗೆ ಎಂದೆ ಕರೆಯುತ್ತಾರೆ ಅಂದರೆ ತಣಿದ ಆಹಾರವನ್ನು ಇಡುವಂತಹ ಅಥವಾ ಶೇಖರಿಸಿ ಇಡುವಂತಹ ಪೆಟ್ಟಿಗೆ ಎಂದು ಅರ್ಥ. ಇದರಲ್ಲಿ ತಾಜಾ ಆಹಾರ ಇರುವುದಿಲ್ಲ ಬದಲು ತಾಜಾ ಆಹಾರವನ್ನು ತಯಾರಿಸಿ ಇಟ್ಟು ಸಾಕಷ್ಟು ಸಮಯದ ವರೆಗೂ ಸೇವಿಸಲು ಸಾಧ್ಯವಿದೆ! ಆದರೆ ನೀವು ಯಾವ ಆಹಾರವನ್ನು ಫ್ರಿಡ್ಜ್ ನಲ್ಲಿ ಎಷ್ಟು ಸಮಯ ಇಡಬೇಕು ಎಂದು ತಿಳಿದುಕೊಳ್ಳದೆ ಇದ್ದರೆ ಅದು ಪೋಷಕಾಂಶಗಳನ್ನು ಕಳೆದುಕೊಂಡು ನಿಮ್ಮ ಆರೋಗ್ಯವನ್ನು ಹದಗೆಡೆಸುತ್ತದೆ.

ಆದರೆ ಇವತ್ತಿನ ಬ್ಯುಸಿ ಜಮಾನದಲ್ಲಿ ನಮಗೆ ಫ್ರೆಶ್ ಆಗಿ ಅಡುಗೆ ಮಾಡಿಕೊಳ್ಳಲು ಕೂಡ ಪುರುಸೊತ್ತಿಲ್ಲ. ಮೊದಲಂತೆ ಈಗ ಹೆಣ್ಣು ಮಕ್ಕಳು ಮನೆಯಲ್ಲಿಯೇ ಕುಳಿತಿರುವುದಿಲ್ಲ ಅವರು ಕೂಡ ಕೆಲಸಕ್ಕೆ ಹೊರಗಡೆ ಹೋಗುವುದರಿಂದ ಮನೆಯಲ್ಲಿ ಆಹಾರ ತಯಾರಿಸುವುದು ಬಹಳ ಕಷ್ಟಕರವಾದ ಕೆಲಸವಾಗಿ ಬಿಟ್ಟಿದೆ. ಇದಕ್ಕಾಗಿ ನಾವು ಸಹಜವಾಗಿಯೇ ಮೈಕ್ರೋವೇವ್ ಅಥವಾ ರೆಫ್ರಿಜರೇಟರ್ ನಂತಹ ಸಾಧನಗಳನ್ನು ಬಳಸುತ್ತೇವೆ ಹಾಗಾದರೆ ಫ್ರಿಡ್ಜ್ ನಲ್ಲಿ ಆಹಾರವನ್ನು ಎಷ್ಟು ಸಮಯ ಇಟ್ಟುಕೊಂಡು ತಿಂದರೆ ಒಳ್ಳೆಯದು ಅಥವಾ ಹೆಚ್ಚು ಸಮಯ ಇಟ್ಟುಕೊಂಡು ತಿಂದರೆ ಏನಾಗುತ್ತೆ ಎಂಬುದನ್ನ ತಿಳಿದುಕೊಳ್ಳೋಣ.

ಯಾವೆಲ್ಲ ವಸ್ತುಗಳನ್ನ ಫ್ರಿಡ್ಜ್ ನಲ್ಲಿ ಇಡುತ್ತೇವೆ!
ಸಾಮಾನ್ಯವಾಗಿ ಅನ್ನದಿಂದ ಹಿಡಿದು ತಿಂಡಿ ತರಕಾರಿ, ದವಸ ಧಾನ್ಯಗಳು, ಕತ್ತರಿಸಿದ ತರಕಾರಿ, ಹಣ್ಣು ಹಂಪಲು, ಮಾಂಸ ಹೀಗೆ ಒಂದೇ ಎರಡೇ ಫ್ರಿಡ್ಜ್ ನಲ್ಲಿ ಏನೆಲ್ಲಾ ಹಿಡಿಸುತ್ತೋ ಇದೆಲ್ಲವನ್ನು ತುಂಬಿಸಿ ಬಿಡುತ್ತೇವೆ. ಹಾಗೆಯೇ ಫ್ರಿಡ್ಜ್ ನಲ್ಲಿ ಸಾಕಷ್ಟು ದಿನಗಳವರೆಗೆ ವಸ್ತುಗಳನ್ನು ಇಟ್ಟುಕೊಂಡು ಸೇವನೆ ಮಾಡುತ್ತೇವೆ. ಅದರಲ್ಲೂ ಡೈರಿ ಉತ್ಪನ್ನಗಳನ್ನು ಹೆಚ್ಚು ಸಮಯ ಫ್ರಿಡ್ಜನಲ್ಲಿ ಇಟ್ಟು ಸೇವಿಸುವುದು ಒಳ್ಳೆಯದಲ್ಲ ಆದರೂ ಫ್ರಿಡ್ಜ್ ನಲ್ಲಿ ಇಂತಹ ವಸ್ತುಗಳನ್ನು ಇಟ್ಟು ಆಹಾರ ಸೇವಿಸುತ್ತೇವೆ. ಆದರೆ ಇದರಿಂದ ನಮ್ಮ ಆರೋಗ್ಯದ ಮೇಲೆ ಎಂತಹ ಕೆಟ್ಟ ಪರಿಣಾಮ ಬೀರಬಹುದು ಎನ್ನುವ ಸಣ್ಣ ಕಲ್ಪನೆ ಕೂಡ ಯಾರಿಗೂ ಇಲ್ಲ.

ನೆನಪಿನಲ್ಲಿಟ್ಟುಕೊಳ್ಳಿ! ಫ್ರಿಡ್ಜ್ ನಲ್ಲಿ ಅನ್ನ ಅಥವಾ ಇತರ ಸಾಂಬಾರ ಪದಾರ್ಥಗಳನ್ನು ಅಂದರೆ ಬೇಯಿಸಿದ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಅದನ್ನು ಒಂದರಿಂದ ಎರಡು ದಿನಗಳ ಒಳಗೆ ಸೇವಿಸಬೇಕು ಮೊದಲು ಫ್ರಿಡ್ಜ್ ನಿಂದ ಹೊರ ತೆಗೆದು ರೂಮ್ ಟೆಂಪರ್ಚರ್ ಗೆ ಬಂದ ನಂತರ ಬಿಸಿ ಮಾಡಿಕೊಂಡು ಸೇವಿಸಬಹುದು.

ಇನ್ನು ಎರಡನೆಯದಾಗಿ ರೋಟಿ ಅಥವಾ ಚಪಾತಿಯನ್ನು ತಯಾರಿಸಿ ಇಟ್ಟುಕೊಂಡಿದ್ದರೆ ಅಥವಾ ಚಪಾತಿ ಹಿಟ್ಟನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಅದನ್ನು 12 ರಿಂದ 14 ಗಂಟೆಗಳ ಒಳಗೆ ಸೇವನೆ ಮಾಡಬೇಕು ಇಲ್ಲವಾದರೆ ಇದರಲ್ಲಿ ಇರುವ ಪೌಷ್ಟಿಕಾಂಶ ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ಶಿಲೀಂದ್ರದಂತಹ ಬ್ಯಾಕ್ಟೀರಿಯಾ ಗಳು ಕೂಡ ಬೆಳೆಯಬಹುದು ಇದು ಕಿಬ್ಬೊಟ್ಟೆ ನೋವಿಗೆ ಕಾರಣವಾಗುತ್ತದೆ. ಇನ್ನು ದಾಲ್ ನಂತಹ ಪದಾರ್ಥವನ್ನು ಎರಡು ದಿನ ಫ್ರಿಡ್ಜ್ ನಲ್ಲಿ ಇಟ್ಟು ತಿನ್ನಬಹುದು ಆದರೆ ಅದಕ್ಕಿಂತ ಹೆಚ್ಚಿಗೆ ಸಮಯ ಫ್ರಿಡ್ಜಿನಲ್ಲಿ ಇಟ್ಟು ನಂತರ ಸೇವನೆ ಮಾಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಇನ್ನು ಮಾಂಸ ಹಾಗೂ ಡೈರಿ ಉತ್ಪನ್ನಗಳನ್ನು ಎರಡು ದಿನಕ್ಕಿಂತ ಹೆಚ್ಚಿಗೆ ಸಮಯ ಫ್ರಿಡ್ಜ್ ನಲ್ಲಿ ಇಟ್ಟು ಸೇವನೆ ಮಾಡುವುದು ಒಳ್ಳೆಯದಲ್ಲ. ಮಾಂಸದ ಮೂಲ ರೂಪವನ್ನು ಎರಡು ದಿನಗಳಿಗಿಂತ ಸ್ವಲ್ಪ ಸಮಯ ಹೆಚ್ಚಿಗೆ ಇಡಬಹುದು ಆದರೆ ಮಾಂಸದಿಂದ ತಯಾರಿಸಿದ ಅಡುಗೆಯನ್ನು ಫ್ರಿಡ್ಜ್ ನಲ್ಲಿ ಹೆಚ್ಚು ಸಮಯ ಇಡುವುದು ಒಳ್ಳೆಯದಲ್ಲ.

ತಪ್ಪಿಯೂ ಈ ಕೆಲಸ ಮಾಡಬೇಡಿ;
ಕತ್ತರಿಸಿ ಇಟ್ಟ ಹಣ್ಣು ಅಥವಾ ತರಕಾರಿಗಳನ್ನು ಫ್ರಿಡ್ಜ್ ನಲ್ಲಿ ಇಡುವುದೇ ಒಳ್ಳೆಯದಲ್ಲ, ಹಾಗೂ ಇಡಬೇಕು ಎಂದಾಗಿದ್ದರೆ ಗಾಳಿ ಆಡದ ಪಾತ್ರೆಯಲ್ಲಿ ಇರಿಸಿ ಇಲ್ಲವಾದರೆ ಅವು ಹಾಳಾಗುತ್ತವೆ. ಹಾಗೂ ಅದನ್ನ ಸೇವಿಸುವುದು ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ. ನೀವೇನಾದ್ರೂ ಪಪ್ಪಾಯಿ ಹಣ್ಣನ್ನ ಫ್ರಿಡ್ಜ್ ನಲ್ಲಿ ಕತ್ತರಿಸಿ ಇಟ್ಟರೆ ಅದನ್ನು ಕನಿಷ್ಠ ಆರು ಗಂಟೆ ಒಳಗೆ ಸೇವಿಸಲೇಬೇಕು ನಂತರ ಆದರೆ ಅದನ್ನ . ಹಾಗೆಯೇ ಕತ್ತರಿಸಿಟ್ಟ ಸೇಬು 4 ಗಂಟೆ ಒಳಗೆ ಸೇವನೆ ಮಾಡಬೇಕು. ಸೇಬನ್ನು ಹೆಚ್ಚು ಸಮಯ ಫ್ರಿಡ್ಜ್ ನಲ್ಲಿ ಇಟ್ಟರೆ ಅದು ಉತ್ಕರ್ಷಣ ಗುಣವನ್ನು ತೋರಿಸುತ್ತದೆ ಅಂದರೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ನು ಸರಿ ಆದ ಗಾಳಿ ಆಡದ ಬಾಕ್ಸ್ ನಲ್ಲಿ ಸ್ಟ್ರಾಬೆರಿ ಅಥವಾ ಬೆರ್ರಿ ಹಣ್ಣುಗಳನ್ನು ಇಟ್ಟರೆ ಮೂರರಿಂದ ಆರು ವಾರಗಳ ವರೆಗೆ ಕೆಡದಂತೆ ಇಟ್ಟುಕೊಳ್ಳಬಹುದು.

ಸಿಟ್ರಿಕ್ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಇಡುವುದಾದರೆ ಒಂದು ವಾರದ ಒಳಗೆ ಅದನ್ನ ಖಾಲಿ ಮಾಡಬೇಕು. ಇನ್ನು ತರಕಾರಿಗಳಾದ ಬೀನ್ಸ್, ಜೋಳ, ಸೌತೆಕಾಯಿ, ಬದನೆಕಾಯಿ, ಮಶ್ರೂಮ್ ಮೊದಲಾದವುಗಳನ್ನ ಸಂಗ್ರಹಿಸುವುದು ಅನಿವಾರ್ಯವಾದರೆ ಕನಿಷ್ಠ ನಾಲ್ಕು ದಿನಗಳ ಒಳಗೆ ಅವುಗಳನ್ನು ಬಳಸಿ ಇಲ್ಲವಾದರೆ ದೇಹದಲ್ಲಿ ದೊಡ್ಡ ಪ್ರಮಾಣದಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಬಹುದು.

ತಜ್ಞರು ಏನಂತಾರೆ?
ಇನ್ನು ಆರೋಗ್ಯ ತಜ್ಞರ ಪ್ರಕಾರ ಹಳೆಯದಾಗಿರುವ ಆಹಾರವನ್ನು 22 ಗಂಟೆಗಳ ನಂತರ ಸೇವಿಸುವುದೇ ಒಳ್ಳೆಯದಲ್ಲ ಇದರಲ್ಲಿ ಬ್ಯಾಕ್ಟೀರಿಯಾ ಮತ್ತು ರೋಗಾಣುಗಳನ್ನು ಉತ್ಪತ್ತಿ ಮಾಡುವಂತಹ ಕ್ರಿಮಿಗಳು ಇರುತ್ತವೆ. ಇದರಿಂದಾಗಿ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ ಹಾಗೂ ದೇಹದ ಅನಾರೋಗ್ಯಕ್ಕೂ ಕಾರಣವಾಗುತ್ತದೆ. ಫ್ರಿಡ್ಜ್ ನಲ್ಲಿ ಇಟ್ಟ ಆಹಾರವನ್ನು ಬೇಯಿಸಿ ಸೇವಿಸಿದಾಗ ಅದರಲ್ಲಿರುವ ಪೋಷಕಾಂಶ ನಾಶವಾಗಿರುತ್ತದೆ ಹಾಗಾಗಿ ನೀವು ಆಹಾರ ಸೇವನೆ ಮಾಡುತ್ತೀರಿಯೇ ಹೊರತು ಅದರಲ್ಲಿರುವ ಯಾವ ಪೋಷಕಾಂಶಗಳು ಕೂಡ ನಿಮ್ಮ ದೇಹವನ್ನು ಸೇರುವುದಿಲ್ಲ.

ಆಹಾರವನ್ನು ತಾಜಾ ರೀತಿಯಲ್ಲಿ ಅಂದರೆ ತಕ್ಷಣಕ್ಕೆ ಬೇಯಿಸಿಕೊಂಡು ಸೇವನೆ ಮಾಡಿದಷ್ಟು ಫ್ರಿಜ್ಜಿನಲ್ಲಿ ಇಟ್ಟ ಆಹಾರ ಒಳ್ಳೆಯದಲ್ಲ ಅದರಲ್ಲೂ 24 ಗಂಟೆಗಳಿಗಿಂತ ಹೆಚ್ಚಿನ ಸಮಯ ಫ್ರಿಜ್ಜಿನಲ್ಲಿ ಬೇಯಿಸಿದ ಆಹಾರಗಳನ್ನು ಇಟ್ಟು ನಂತರ ಸೇವನೆ ಮಾಡುವುದು ಖಂಡಿತವಾಗಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ ಅದರಲ್ಲೂ ಮಕ್ಕಳಿಗಂತೂ ಫ್ರಿಡ್ಜ್ ನಲ್ಲಿ ಇಟ್ಟ ಆಹಾರ ಕೊಡುವುದನ್ನು ಆದಷ್ಟು ತಪ್ಪಿಸಿ ಮಕ್ಕಳಿಗೆ ಶುಚಿ-ರುಚಿಯಾದ ತಾಜಾ ಆಹಾರವನ್ನು ತಯಾರಿಸಿ ಕೊಡಿ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries