ಕಾಸರಗೋಡು: ವಿಶ್ವ ಪಾರಂಪರಿಕ ಸಪ್ತಾಹದ ಅಂಗವಾಗಿ ಬೇಕಲ ಕೋಟೆಯಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು. ಕೇಂದ್ರ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶ್ವ ಪರಂಪರೆಯ ದಿನದ ಸಪ್ತಾಹದ ಆರಂಭ ದಿನವಾದ ಭಾನುವಾರ ಬೇಕಲ್ ಕೋಟೆ ಸಂದರ್ಶಿಸಿದ ಪ್ರವಸಿಗರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.
ಬೇಕಲ ಕೋಟೆಯನ್ನು ತ್ರಿವರ್ಣ ಬೆಳಕಿನಲ್ಲಿ ಅಲಂಕರಿಸಲಾಗಿತ್ತು. ವಿಶ್ವ ಪರಂಪರೆಯ ಸಪ್ತಾಹ ನ.25 ರವರೆಗೆ ಪ್ರದರ್ಶನ ಮುಂದುವರಿಯಲಿರುವುದಗಿ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ತ್ರಿಶ್ಯೂರ್ ಸರ್ಕಲ್ ಪ್ರಕಟಣೆಯಲ್ಲಿ ತಿಳಿಸಿದೆ.