ಬದಿಯಡ್ಕ: ಬದಿಯಡ್ಕದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ವೃತ್ತಿಪರಿಚಯ ಮೇಳದಲ್ಲಿ ಹೈಸ್ಕೂಲ್ ವಿಭಾಗದ ಗೊಂಬೆ ತಯಾರಿಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಕೃತ್ತಿಕ ದ್ವಿತೀಯ, ಇಲೆಕ್ಟ್ರೋನಿಕ್ಸ್‍ನಲ್ಲಿ ರಾಹುಲ್ ಯಾದವ್ ದ್ವಿತೀಯ, ಬುಕ್ ಬೈಂಡಿಂಗ್‍ನಲ್ಲಿ ಅನನ್ಯ ತೃತೀಯ, ವೆಜಿಟೇಬಲ್ ಪ್ರಿಂಟಿಂಗ್‍ನಲ್ಲಿ ಸ್ಮಿತ ತೃತೀಯ, ಮರದ ಕೆತ್ತನೆಯಲ್ಲಿ ನಿತೇಶ್ ತೃತೀಯ, ಯುಪಿ ವಿಭಾಗದ ಮರದ ಕೆತ್ತನೆಯಲ್ಲಿ ಇಶಾಂ ತೃತೀಯ, ನೂಲಿನ ನಮೂನೆಯಲ್ಲಿ ಚಿನ್ಮಯ ದ್ವಿತೀಯ, ಎಲ್ ಪಿ ವಿಭಾಗದ ಬುಕ್ ಬೈಂಡಿಂಗ್‍ನಲ್ಲಿ ಕೃತಿಕಾದೇವಿ ದ್ವಿತೀಯ, ನಿರುಪಯುಕ್ತ ಉತ್ಪನ್ನದಲ್ಲಿ ನಮಿಷ ದ್ವಿತೀಯ, ಮೆಟಲ್ ಎನ್ ಗ್ರೇವಿಂಗ್ ನಲ್ಲಿ ಕಾರ್ತಿಕ್ ಕೃಷ್ಣ ತೃತೀಯ ಸ್ಥಾನಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.