ಜಮ್ಮು: ಭಯೋತ್ಪಾದಕರಿಗೆ ಹಣ, ವಸತಿ ಹಾಗೂ ಸರಕು ಸಾರಿಗೆ ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸುತ್ತಿದ್ದ ಆರೋಪದ ಮೇಲೆ ಬಂಧಿಸಿರುವ ಮೊಹಮ್ಮದ್ ಯಾಸಿನ್‌ಗೆ ಸೇರಿದ ಸ್ಥಿರಾಸ್ತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶುಕ್ರವಾರ ಜಪ್ತಿ ಮಾಡಿದೆ.
ಜಮ್ಮು: ಭಯೋತ್ಪಾದಕರಿಗೆ ಹಣ, ವಸತಿ ಹಾಗೂ ಸರಕು ಸಾರಿಗೆ ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸುತ್ತಿದ್ದ ಆರೋಪದ ಮೇಲೆ ಬಂಧಿಸಿರುವ ಮೊಹಮ್ಮದ್ ಯಾಸಿನ್‌ಗೆ ಸೇರಿದ ಸ್ಥಿರಾಸ್ತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶುಕ್ರವಾರ ಜಪ್ತಿ ಮಾಡಿದೆ.
ಸೆಪ್ಟೆಂಬರ್ 30ರಂದು ಜಮ್ಮುವಿನಲ್ಲಿರುವ ಎನ್‌ಐಎ ಕೋರ್ಟ್ ಆದೇಶದ ಮೇರೆಗೆ ಬಾಲಾಕೋಟ್ ತಾಲ್ಲೂಕು ವ್ಯಾಪ್ತಿಯಲ್ಲಿರುವ ಧಾಬಿ-ಧಾರಟಿ ಗ್ರಾಮದಲ್ಲಿದ್ದ ಆರೋಪಿಯ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
ಬಾಲಾಕೋಟ್ ಸೆಕ್ಟರ್‌ನಲ್ಲಿ ಭಯೋತ್ಪಾದಕರಿಗೆ ವಿವಿಧ ಸೌಕರ್ಯಗಳನ್ನು ಒದಗಿಸುತ್ತಿದ್ದ ಈತನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಬಂಧಿಸಲಾಗಿದ್ದು, ಜಮ್ಮುವಿನ ಕೋಟೆ ಬಲವಾಲ್‌ನಲ್ಲಿರುವ ಕೇಂದ್ರೀಯ ಕಾರಾಗೃಹದಲ್ಲಿ ಇಡಲಾಗಿದೆ.