ಬದಿಯಡ್ಕ: ಶಿಕ್ಷಕರ ಕರ್ತವ್ಯನಿμÉ್ಠ ಜೊತೆ ಅರ್ಪಣಾ ಮನೋಭಾವದ ನಿರ್ವಹಣೆಯು ಉತ್ತಮ ಸಮಾಜದ ಸೃಷ್ಟಿಗೆ ಕಾರಣವಾಗುವುದು ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕ ಶಂಕರ ಸಾರಡ್ಕ ತಿಳಿಸಿದರು.
ಪೆರಡಾಲ ನವಜೀವನ ಶಾಲೆಯಲ್ಲಿ ನಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೇಷ್ಠವೃತ್ತಿಯಾದ ಅಧ್ಯಾಪನದ ತಮ್ಮ ಅನುಭವಗಳನ್ನು ನೆನಪಿಸಿದರು. ಅಧ್ಯಾಪಕನು ಶಾಲಾ ಕರ್ತವ್ಯ ದ ಭಾಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಅನಿವಾರ್ಯತೆ ಪ್ರಸ್ತುತ ಪಡಿಸಿ ಸಮಾಜದ ಗೌರವಕ್ಕೆ ಪಾತ್ರರಾಗುವ ವಿಧ ವಿವರಿಸಿದರು. ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ ರಾವ್ ಸಂಘದ ಮುಂದಿನ ಕಾರ್ಯಯೋಜನೆ ತಿಳಿಸಿದರು. ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶಶಿಧರ ಅವರು ಶುಭ ಹಾರೈಸಿ ಅಧ್ಯಾಪಕರು ಕನ್ನಡದ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಕೋರಿದರು. ಕೇಂದ್ರ ಸಮಿತಿ ಕೋಶಾಧಿಕಾರಿ ಪದ್ಮಾವತಿ, ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಶುಭಹಾರೈಸಿದರು. ಉಪಜಿಲ್ಲಾ ಅಧ್ಯಕ್ಷ ಪ್ರಶಾಂತ್ ಕುಮಾರ್ ಅಧ್ಯಕ್ಷತೆವಹಿಸಿದ್ದರು. ಅಡೂರು ಕನ್ನಡ ಹಿತರಕ್ಷಣಾ ವೇದಿಕೆ ಅಧ್ಯಕ್ಷೆ ನಯನಾ ಗಿರೀಶ್ ಅವರು ಕನ್ನಡ ಅಧ್ಯಾಪಕರಿಗಾಗಿ ನಡೆಸಿದ ಹೋರಾಟದ ವಿವಿಧ ಮಜಲುಗಳನ್ನು ಪರಿಚಯಿಸಿದರು. ಸಂಘದ ಮಾಜಿ ವಕ್ತಾರ ವಿಶಾಲಾಕ್ಷ ಪುತ್ರಕಳ ಮಾತನಾಡಿ ಕನ್ನಡ ಹೋರಾಟ ಮತ್ತು ಶಿಕ್ಷಣ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದರು.ಉಪಾಧ್ಯಕ್ಷೆ ಪ್ರಭಾವತಿ ಕೆದಿಲಾಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಸರಾ ಹಬ್ಬದ ಆಚರಣೆ ಪ್ರಯುಕ್ತ ನಡೆಸಿದ ರಸಪ್ರಶ್ನೆ, ಹುಲಿ ವೇಷ ಕುಣಿತ ಸ್ಪರ್ಧೆ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯದರ್ಶಿ ನವಪ್ರಸಾದ್ ಸ್ವಾಗತಿಸಿ, ವಂದಿಸಿದರು. ನವೀನಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪ್ರತಿನಿಧಿ ಸಮಾವೇಶ ನಡೆಯಿತು. ಉಪಾಧ್ಯಕ್ಷ ವೆಂಕಟ್ರಾಜ ಸ್ವಾಗತಿಸಿ, ಕಾರ್ಯದರ್ಶಿ ನವಪ್ರಸಾದ್ ಗತವರ್ಷದ ವರದಿ ಹಾಗೂ ಕೋಶಾಧಿಕಾರಿ ರಾಜು ಸ್ಟೀವನ್ ಆಯ ವ್ಯಯ ಮಂಡಿಸಿದರು. ಸಂಘಟನಾತ್ಮಕ ವಿಷಯಗಳ ಚರ್ಚೆ ನಡೆಯಿತು. ಮುಂದಿನ ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ಅಧ್ಯಕ್ಷರಾಗಿ, ನವಪ್ರಸಾದ್ ವಿದ್ಯಾಗಿರಿ ಕಾರ್ಯದರ್ಶಿಯಾಗಿ ಮತ್ತು ರಾಜೇಶ್ ಉಬ್ರಂಗಳ ಕೋಶಾಧಿಕಾರಿಯಾಗಿ ಆಯ್ಕೆಯಾದರು. ಕಾರ್ಯಕಾರೀ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಗತವರ್ಷದ ಚಟುವಟಿಕೆಗಳ ವಿವರದ "ಅಧ್ಯಾಪಕ ಧ್ವನಿ " ಪತ್ರಿಕೆ ಹಾಗೂ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.