ನಮ್ಮ ದೇಹದ ಪ್ರತಿಯೊಂದು ನರವೂ ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ. ಆದ್ದರಿಂದಲೇ ಆಕ್ಯೂಪ್ರೆಷರ್, ಆಯುರ್ವೇದ ಮುಂತಾದ ಚಿಕಿತ್ಸೆಯಲ್ಲಿ ಕೆಲವೊಂದು ಸಮಸ್ಯೆಗಳನ್ನು ಗುಣಪಡಿಸಲು ದೇಹದ ನಿರ್ದಿಷ್ಟ ಭಾಗಕ್ಕೆ ಮಸಾಜ್ ಮಾಡುವುದು, ಒತ್ತಡ ಹಾಕುವುದು ಮಾಡುತ್ತಾರೆ. ನಮ್ಮ ದೇಹದ ಹೊಕ್ಕಳ ಭಾಗವಂತೂ ತುಂಬಾನೇ ಪ್ರಮುಖವಾದ ಭಾಗ. ಹೊಕ್ಕಳ ಭಾಗಕ್ಕೆ ಎಣ್ಣೆ ಹಾಕ ಮಸಾಜ್ ಮಾಡಿದರೆ ಒಳ್ಳೆಯದು ಎಂಬುವುದರ ಬಗ್ಗೆ ಕೇಳಿರುತ್ತೀರ.. ಇದನ್ನು ನೇವಲ್ ಥೆರಪಿ ಎಂದು ಕರೆಯಲಾಗುವುದು ಅಂದರೆ ಹೊಕ್ಕಳಿನ ಚಿಕಿತ್ಸೆ ಎಂದರ್ಥ.
ನ್ಯೂಟ್ರಿಷಿಯನಿಸ್ಟ್ ರಮಿತಾ ಕೌರ್ ಅವರು ಹೊಕ್ಕಳಿನೊಂದಿಗೆ 72000 ನರಗಳು ಸಂಬಂಧ ಹೊಂದಿರುತ್ತದೆ, ಆದ್ದರಿಂದ ಹೊಕ್ಕಳಿಗೆ ಎಣ್ಣೆ ಮಸಾಜ್ ಮಾಡಿದರೆ ದೊರೆಯುವ ಪ್ರಯೋಜನಗಳ ಬಗ್ಗೆ ತಮ್ಮ ಸಾಮಾಜಿಕ ತಾಣದಲ್ಲಿ ವಿವರಿಸಿದ್ದಾರೆ.
ಹೊಕ್ಕಳಿಗೆ ಮಸಾಜ್ ಮಾಡುವುದರಿಂದ ನರಗಳನ್ನು ಉತ್ತೇಜಿಸುತ್ತದೆ, ಇದರಿಂದ ಅನೇಕ ಆರೊಗ್ಯ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಅದರಲ್ಲೂ ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ ಏನು ಪ್ರಯೋಜನ ಎಂಬುವುದರ ಬಗ್ಗೆ ಕೂಡ ತುಂಬಾ ಚೆನ್ನಾಗಿ ವಿವರಿಸಿದ್ದಾರೆ, ಈ ಹೊಕ್ಕಳ ಚಿಕಿತ್ಸೆ ಬಗ್ಗೆ ನೋಡುವುದಾದರೆ....
ಬಾದಾಮಿ: ಮುಖದ ಕಾಂತಿ ಹೆಚ್ಚಾಗಬೇಕ ಎಂದರೆ ಹೊಕ್ಕಳಿಗೆ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿದರೆ ಒಳ್ಳೆಯದು.
ತೆಂಗಿನೆಣ್ಣೆ: ಮಹಿಳೆಯರು ಹೊಕ್ಕಳ ಭಾಗಕ್ಕೆ ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದರಿಂದ ಸಂತಾನೋತ್ಪತ್ತಿ ಸಾಮರ್ಥ್ಯ ಚೆನ್ನಾಗಿರಲಿದೆ.
* ಸಾಸಿವೆಯೆಣ್ಣೆ: ಸಂಧಿವಾತ, ಮೂಳೆಗಳಲ್ಲಿ ನೋವು ಈ ಬಗೆಯ ಸಮಸ್ಯೆಯಿದ್ದರೆ ಸಾಸಿವೆಯೆಣ್ಣೆಯನ್ನು ಹೊಕ್ಕಳ ಬಾಗಕ್ಕೆ ಹಾಕಿ ಮಸಾಜ್ ಮಾಡಿದರೆ ಒಳ್ಳೆಯದು.
* ಕಹಿಬೇವಿನ ಎಣ್ಣೆ: ಹೊಕ್ಕಳಿಗೆ ಕಹಿಬೇವಿನ ಎಣ್ಣೆ ಹಾಕಿ ಮಸಾಜ್ ಮಾಡಿದರೆ ತ್ವಚೆಗೆ ತುಂಬಾ ಒಳ್ಳೆಯದು. ಈ ಎಣ್ಣೆಯ ಮಸಾಜ್ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು, ತ್ವಚೆಯಲ್ಲಿ ಉರಿಯೂತ ಈ ಬಗೆಯ ಸಮಸ್ಯೆಗಳಿದ್ದರೆ ಕಡಿಮೆಯಾಗುವುದು.
* ಸಾಸಿವೆಯೆಣ್ಣೆ ಮತ್ತು ಎಳ್ಳೆಣ್ಣೆ: ಈ ಎರಡು ಎಣ್ಣೆಯನ್ನು ಮಿಶ್ರ ಮಾಡಿ ಹೊಕ್ಕಳ ಭಾಗಕ್ಕೆ ಹಚ್ಚಿದರೆ ಹೊಟ್ಟೆ ಉಬ್ಬುವಿಕೆ, ವಾಂತಿ, ಅಜೀರ್ಣ ಸಮಸ್ಯೆ, ಹೊಟ್ಟೆ ನೋವು ಈ ಬಗೆಯ ಸಮಸ್ಯೆ ಕಡಿಮೆ ಮಾಡುತ್ತದೆ
* ಆಲೀವ್ ಎಣ್ಣೆ: ಆಲೀವ್ ಎಣ್ಣೆಯಿಂದ ಮಸಾಜ್ ಮಾಡಿದರೆ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದು.
* ಸಾಸಿವೆಯೆಣ್ಣೆ: ಸಾಸಿವೆಯೆಣ್ಣೆಯನ್ನು ಹೊಕ್ಕಳಿಗೆ ಹಾಕಿ ಮಸಾಜ್ ಮಾಡುವುದರಿಂದ ಕರುಳಿನಲ್ಲಿರುವ ಬೇಡದ ಬ್ಯಾಕ್ಟಿರಿಯಾ ಹೋಗಲಾಡಿಸುತ್ತೆ ಹಾಗೂ ತುಟಿ ಒಣಗುವುದನ್ನು ತಡೆಗಟ್ಟುತ್ತದೆ.
ಸಾಸಿವೆಯೆಣ್ಣೆಯನ್ನು ಬಳಸುವುದರಿಂದ ದೊರೆಯುವ ಪ್ರಯೋಜನವೇನು?
ಸಾಸಿವೆಯೆಣ್ಣೆ ಬಳಸುವುದರಿಂದ ಉರಿಯೂತ, ನೋವು ಈ ಬಗೆಯ ಸಮಸ್ಯೆ ಕಡಿಮೆಯಾಗುವುದು.
ಈ ಎಲ್ಲಾ ಎಣ್ಣೆಗಳನ್ನು ಮಿಕ್ಸ್ ಮಾಡಿ ಬಳಸಬಹುದೇ?
ಒಂದು ಬಾರಿಗೆ ಒಂದು ಎಣ್ಣೆ ಬಳಸುವುದು ಒಳ್ಳೆಯದು.
ಕುತ್ತಿಗೆಯಲ್ಲಿ ನೋವಿದ್ದರೆ ಯಾವ ಎಣ್ಣೆ ಹಚ್ಚಿದರೆ ಒಳ್ಳೆಯದು?
ಹರಳೆಣ್ಣೆಯನ್ನುಹೊಕ್ಕಳಿಗೆ ತಿಕ್ಕಿದರೆ ಕುತ್ತಿಗೆಯಲ್ಲಿನ ನೋವು ಕಡಿಮೆಯಾಗುವುದು.
ಕೂದಲಿನ ಆರೋಗ್ಯಕ್ಕೆ ಹೊಕ್ಕಳ ಭಾಗಕ್ಕೆ ಯಾವ ಎಣ್ಣೆ ಹಚ್ಚಿದರೆ ಒಳ್ಳೆಯದು
ಕೂದಲಿನ ಆರೋಗ್ಯಕ್ಕೆ ಹೊಕ್ಕಳಿನ ಭಾಗಕ್ಕೆ ತೆಂಗಿನೆಣ್ಣೆ ಹಚ್ಚಿದರೆ ಒಳ್ಳೆಯದು.