ಕಾಸರಗೋಡು: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಪ್ರಸಕ್ತ ಜಾರಿಯಲ್ಲಿರುವ ಕಾನೂನುಗಳು ಪ್ರಬಲವಾಗಿದ್ದು, ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕು ಎಂಬುದಾಗಿ ಮಹಿಳಾ ಆಯೋಗದ ಸದಸ್ಯೆ, ವಕೀಲೆ ಕುಞËಯಿಷಾ ತಿಳಿಸಿದ್ದಾರೆ.
ಅವರು ಕೇರಳ ಮಹಿಳಾ ಆಯೋಗದ ವತಿಯಿಂದ ಪಡನ್ನ ಗ್ರಾಮ ಪಂಚಾಯಿತಿಯ ಮಹಿಳಾ ಜಾಗೃತ ಸಮಿತಿ ಸದಸ್ಯರಿಗಾಗಿ ಎಡಚ್ಚಕೈ ಆರ್‍ಸಿಒ ಸಭಾಂಗಣದಲ್ಲಿ ಆಯೋಜಿಸಲಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ವಿ. ಮುಹಮ್ಮದ್ ಅಸ್ಲಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಾಗೃತ ಸಮಿತಿ ಕೌನ್ಸಿಲರ್ ಪಿ.ಸುಕುಮಾರಿ ನೇತೃತ್ವ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷ ಪಿ. ಬುಶ್ರಾ, ಬ್ಲಾಕ್‍ಪಂಚಾಐಇತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಸುಮೇಶ್, ಸದಸ್ಯ ಟಿ. ರತೀಲಾ, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ಪಿ. ಶಾಹಿದಾ, ಟಿ.ಕೆ.ಎಂ ಮುಹಮ್ಮದ್ ರಫೀಕ್, ಪಿ.ವಿ.ಅನಿಲಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಎಂ. ರಾಘವನ್, ಸಿಡಿಎಸ್ ಅಧ್ಯಕ್ಷ ಸಿ. ರೀನಾ, ಯೋಜನಾ ಸಮಿತಿ ಉಪಾಧ್ಯಕ್ಷ ಕೆ. ಅಸೈನಾರ್‍ಕುಞÂ, ಪಿ.ಸಿ. ಸುಬೈದಾ,ಸಿ. ಕುಞÂಕೃಷ್ಣನ್ ಮಾಸ್ಟರ್, ಕೆ.ವಿ. ಜ್ಯತೀಂದ್ರನ್, ಕೆ.ವಿ. ಗೋಪಾಲನ್, ಐಸಿಡಿಎಸ್ ಮೇಲ್ವಿಚಾರಕಿ ಪಿ. ರೇವತಿ ಹಾಗೂ ಸಹಾಯಕ ಕಾರ್ಯದರ್ಶಿ ವಿನೋದ್ ಉಪಸ್ಥಿತರಿದ್ದರು.