ಕೊಚ್ಚಿ: ಕಲಮಸ್ಸೆರಿ ಸ್ಫೋಟ ಪ್ರಕರಣವನ್ನು ಎನ್‍ಐಎ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಡಿಜಿಟಲ್ ಸಾಧನಗಳ ಸೈಬರ್ ಪೋರೆನ್ಸಿಕ್ ಪರೀಕ್ಷೆಯ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಿದ ನಂತರ ಈ ಬಗ್ಗೆ ಕ್ರಮವನ್ನು ಕೈಗೊಳ್ಳಲಾಗುವುದು.
ತಪಾಸಣಾ ಫಲಿತಾಂಶ ಬಂದ ನಂತರ ಎನ್‍ಐಎ ತನಿಖೆಗೆ ವಹಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಪ್ರಕರಣದಲ್ಲಿ ಯುಎಪಿಎ ಆರೋಪ ಮಾಡಲಾಗಿದೆ. ಎನ್‍ಐಎ ಕೂಡ ಪ್ರಕರಣದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಪ್ರಕರಣದಲ್ಲಿ ಆರೋಪಿ ಡೊಮಿನಿಕ್ ಮಾರ್ಟಿನ್ ನನ್ನು ರಿಮಾಂಡ್ ಮಾಡಲಾಗಿದೆ. ಈ ತಿಂಗಳ 29ರವರೆಗೆ ರಿಮಾಂಡ್ ನೀಡಲಾಗಿದೆ.