ಕಾಸರಗೋಡು: ಕೋಟೆ ಚಾವಡಿ ಧೂಮಾವತಿ ಸನ್ನಿಧಿಯ ದೀಪಾವಳಿ ನೇಮೋತ್ಸವ ನ.12 ರಂದು ಭಾನುವಾರ ನಡೆಯಲಿದ್ದು, ದೈವ ಕೋಲ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಸಮಿತಿ ಗೌರವ ಅಧ್ಯಕ್ಷ ನಿರಂಜನ್ ಕೊರಕೋಡು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಶಶಿಕಾಂತ ಶೆಟ್ಟಿ, ಕೆ.ಎನ್. ವೆಂಕಟ್ರಮಣ ಹೊಳ್ಳ, ಅರಿಬೈಲ್ ಗೋಪಾಲ ಶೆಟ್ಟಿ, ವಾಮನ್ ರಾವ್ ಬೇಕಲ್, ಜಯಾನಂದ ಕುಮಾರ್ ಹೊಸದುರ್ಗ, ವಿಶಾಲಕ್ಷ ಪುತ್ರಕಳ, ಜಗನ್ನಾಥ್ ಶೆಟ್ಟಿ, ಜಗದೀಶ್ ಕೂಡ್ಲು, ಪ್ರದೀಪ್ ಬೇಕಲ್, ರವಿ ನಾಯ್ಕಾಪು ಮುಂತಾದವರಿದ್ದರು.