ಶಬರಿಮಲೆ: ಶಬರೀಶನ ದರ್ಶನಗೈಯ್ಯಲು ಬೆಟ್ಟವೇರಿ ಸಾಗುವುದು ಪಾಪಗಳಿಂದ ಮೋಕ್ಷ ಹುಡುಕುವ ಪ್ರಯಾಣವಾಗಿದೆ. ಕಲ್ಲು, ಮುಳ್ಳುಗಳಿಂದ ಕೂಡಿದ ಹಾದಿಯಲ್ಲಿ ಸಾಗುವ ಪಯಣ ಯಾರಿಗಾದರೂ ಭಯ ಹುಟ್ಟಿಸುವಂತಿದ್ದರೂ ಅಯ್ಯಪ್ಪಸ್ವಾಮಿಯ ಆಶೀರ್ವಾದದಿಂದ ಭಯವೆಲ್ಲ ಪಂಬಾ ದಾಟಿ ಭಕ್ತಿಯಲ್ಲಿ ಕರಗುತ್ತದೆ.
ಕಾಡು ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುವ ಕರಿಮಲ ಪಥದ ಮೂಲಕ ಯಾತ್ರೆಯು ಭಕ್ತಿ ಮತ್ತು ರೋಮಾಂಚನದ ಪ್ರಯಾಣವಾಗಿದೆ.
ಹಲವು ಕಷ್ಟಗಳನ್ನು ದಾಟಿ ಅಯ್ಯಪ್ಪ ಸನ್ನಿಧಿ ತಲುಪಿದಾಗ ಇಲ್ಲಿಯವರೆಗೆ ಅನುಭವಿಸಿದ ಸಂಕಟಗಳು ಸಾರ್ಥಕತೆಯಲ್ಲಿ ಕರಗಿ ಹೋಗುತ್ತವೆ. ಈ ಪ್ರಯಾಸಕರ ಪ್ರಯಾಣವನ್ನು ಜಯಿಸುವ ಪುಟಾಣಿ ಅಯ್ಯಪ್ಪ ಮಾಲಧಾರಿಗಳು ಪ್ರತಿ ಮಂಡಲ ಋತುವಿನ ಆಕರ್ಷಣೆ. ಶಬರೀಶನ ದರ್ಶನಕ್ಕ ಹಿರಿಯರ ಕೈಹಿಡಿದು ಬರಿಗಾಲಿನಲ್ಲಿ ನಡೆದು ಸಾಗುವ ದೃಶ್ಯ ಯಾರಿಗಾದರೂ ಕುತೂಹಲ ಮತ್ತು ವಿಸ್ಮಯವನ್ನು ಉಂಟುಮಾಡುತ್ತದೆ.
ಈ ಮೂಲಕ ಮೂರು ವರ್ಷದ ಏಕಲವ್ಯನ್ ಎಂಬ ಬಾಲಕ ಸನ್ನಿಧಿಯಲ್ಲಿ ಸ್ಟಾರ್ ಆಗಿದ್ದಾನೆ. ಹುಡುಗ ಅಂತಹ ವಯೋಸಹಜ ಚೇಷ್ಟೆಯಿಂದೊಡಗೂಡಿ ಅಪ್ಪನ ಕೈ ಹಿಡಿದು ಸನ್ನಿಧಿ ತಲುಪಿದ. ಏಕಲವ್ಯನ್ ಇತರ ಮಕ್ಕಳಂತೆ ಹೆಗಲೇರಿ ಅಯ್ಯಪ್ಪ ದರ್ಶನಕ್ಕೆ ಬಂದದ್ದಲ್ಲ. ಕಿಲೋಮೀಟರುಗಳನ್ನು ಪುಟ್ಟ ಕಾಲುಗಳಿಂದ ಹೆಜ್ಜೆ ಹಾಕುತ್ತಾ ಜೋರಾಗಿ ಶರಣು ಮೊಳಗಿಸುತ್ತಾ ಶುಕ್ರವಾರ ಸನ್ನಿಧಾನ ತಲುಪಿದರು.
ಈ ಏಕಲವ್ಯನ್ ಕುಂಞÂ್ಞ ಅಯ್ಯಪ್ಪ ವ್ರತಧಾರಿಗೆ ಕಟ್ಟುನಿಟ್ಟಿನ ತನ್ನದೇ ಹಠವಿತ್ತು. ದೇಹವನ್ನು ಯಾರೂ ಮುಟ್ಟಬಾರದು, ಕೂದಲನ್ನು ಯಾರೂ ಮುಟ್ಟಬಾರದು, ತೆಂಗಿನಕಾಯಿಯನ್ನು ಯಾರೂ ಮುಟ್ಟಬಾರದು, ಇತ್ಯಾದಿ. ಏಕಲವ್ಯನ್ ಅಯ್ಯಪ್ಪಸ್ವಾಮಿಯ ವೇಶಧರಿಸಿ ಬಂದಿದ್ದು ಮತ್ತೊಂದು ವಿಶೇಷ. ದಾರಿಯುದ್ದಕ್ಕೂ ದೇಹ ಆಯಾಸಗೊಳ್ಳುತ್ತಿದ್ದರೂ ಹಠ ಬಿಡದೆ ಸಾಗಿಬಂದಿದ್ದಾನೆ. ಜೊತೆಗೆ ತಂದೆ, ತಂದೆಯ ಸ್ನೇಹಿತರು, ಏಕಲವ್ಯನ ಸಹೋದರ ಆರರ ಹರೆಯದ ಧ್ರುವ ಜೊತೆಗಿದ್ದರು.
ಏಕಲವ್ಯನ್ ತಿರುವನಂತಪುರಂ ಚಿರಾಯಂಕೀಜ್ ಪ್ರದೇಶ ವಾಸಿ. ಶಬರಿಮಲೆ ಸನ್ನಿಧಿಯಲ್ಲಿ ತಲಪುತ್ತಿದ್ದಂತೆ ಸಹಜ ಬಾಲ ವಿನೋದಗಳಿಂದ ವಿಮುಖನಾಗಿ ಅಯ್ಯಪ್ಪ ಮೂರ್ತಿಯಲ್ಲಿ ಭಕ್ತಿನೆಟ್ಟು ಶರಣು ಘೋಷಣೆ ಮಾಡುತ್ತಾ ಕೃತಾರ್ಥತೆ ಅನುಭವಿಸಿದ ಮುಗ್ದಸ್ನಿಗ್ದತೆ ಗಮನ ಸೆಳೆಯಿತು.