ಕಾಸರಗೋಡು: ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ವಾಟ್ಸ್‍ಅಪ್ ಸಂದೇಶ ರವಾನಿಸಿ ನಾಪತ್ತೆಯಾಗಿದ್ದ ಉಳಿಯತ್ತಡ್ಕ ರಹಮತ್ ನಗರ ನಿವಾಸಿ ಹಾಗೂ ವ್ಯಾಪಾರಿ ಹಸೈನಾರ್ ನಾಪತ್ತೆಯಾಗಿದ್ದಾರೆ. ಇವರ ಕಾರು, ಚಪ್ಪಲಿ ಹಾಗೂ ಮೊಬೈಲ್ ಚಂದ್ರಗಿರಿ ಹೊಳೆ ಸಮೀಪ ಕಂಡುಬಂದಿದ್ದು, ಹೊಳೆಗೆ ಹಾರಿದ ಬಗ್ಗೆ ಸಂಶಯ ವ್ಯಕ್ತವಾಗಿದೆ. ನಾಪತ್ತೆಯಾಗಿರುವ ಹಸೈನಾರ್ ಅವರಿಗಾಗಿ ಪೊಲೀಸ್, ಕರಾವಳಿ ಪೊಲೀಸ್ ಹಾಗೂ ಮುಳುಗು ತಜ್ಞರು ವ್ಯಾಪಕ ಹುಡುಕಾಟ ಆರಂಭಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಇವರು ನಾಪತ್ತೆಯಾಗಿದ್ದು, ಅಲ್ಪ ಹೊತ್ತಿನಲ್ಲಿ ಇವರ ಕಾರು ಸೇತುವೆ ಸನಿಹ ಪತ್ತೆಯಾಗಿದ್ದು, ಹೊಳೆಗೆ ಹಾರಿರುವ ವದಂತಿಗೆ ಪುಷ್ಠಿ ನೀಡಿದೆ. ಹಸೈನಾರ್ ಚಂದ್ರಗಿರಿ ಜಂಕ್ಷನ್ ಬಳಿ ಜ್ಯೂಸ್ ಅಂಗಡಿ ನಡೆಸುತ್ತಿದ್ದರು. ಕಾರು, ಚಪ್ಪಲಿ ಹಾಗೂ ಮೊಬೈಲ್ ಹಸೈನರ್ ಅವರದ್ದಾಗಿದೆ ಎಂಬುದನ್ನು ಸಂಬಂಧಿಕರು ಖಚಿತಪಡಿಸಿದ್ದಾರೆ. ನಾಪತ್ತೆಯಾಗಿರುವ ಬಗ್ಗೆ ನಗರ ಠಾಣೆ ಪೊಲೀಸರು ಕೇಸು ದಆಖಲಿಸಿಕೊಮಡಿದ್ದಾರೆ. ನಗರ ಠಾಣೆ ಇನ್ಸ್‍ಪೆಕ್ಟರ್ ಅಜಿತ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಮುಮದುವರಿದಿದೆ.