ಮುಂಬೈ: ನಗರದ ಲೋವರ್ ಪರೆಲ್‌ನಲ್ಲಿರುವ ಡೆಲಿಸ್ಲೆ ಮೇಲ್ಸೇತುವೆಯನ್ನು ಅಧಿಕಾರಿಗಳ ಅನುಮತಿ ಇಲ್ಲದೆ ಉದ್ಘಾಟಿಸಿದ ಆರೋಪದ ಮೇಲೆ ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ, ಸುನಿಲ್ ಶಿಂದೆ ಹಾಗೂ ಸಚಿನ್ ಅಹಿರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೃಹನ್ ಮುಂಬೈ ಮಹಾನಗರ ಪಾಲಿಗೆ (ಬಿಎಂಸಿ) ಅಧಿಕಾರಿಗಳು ದೂರು ನೀಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಆದಿತ್ಯ ಠಾಕ್ರೆ ಹಾಗೂ ಇತರರು ನವೆಂಬರ್ 16ರಂದು ಮೇಲ್ಸೇತುವೆ ಉದ್ಘಾಟಿಸಿದ್ದಾರೆ. ಆದರೆ, ಸೇತುವೆಯ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಸಂಬಂಧ ಎನ್.ಎಂ.ಜೋಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.