ಕಾಸರಗೋಡು: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಪಾಲಿಯೇಟಿವ್ ರೋಗಿಗಳಿಗೆ ಉಪಶಾಮಕ ಆರೈಕೆ ಮತ್ತು ಔಷಧಿಗಳ ವೆಚ್ಚಕ್ಕಾಗಿ ಕಾಞಂಗಾಡು ನಗರಸಭೆ 39 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಪಾಲಿಯೇಟಿವ್ ಕೇರ್‍ನ ಒಂದು ವರ್ಷದ ಉಪಶಾಮಕ ಆರೈಕೆ ಚಟುವಟಿಕೆಗಳಿಗಾಗಿ ಕಾಞಂಗಾಡ್ ನಗರಸಭೆ ಈ ಮೊತ್ತವನ್ನು ವಿನಿಯೋಗಿಸಲಿದೆ.
ಯೋಜನೆಯ ಅಂಗವಾಗಿ ನೋಂದಾಯಿತ ಪಾಲಿಯೇಟಿವ್ ರೋಗಿಗಳಿಗೆ ಉಪಕರಣಗಳ ವಿತರಣೆ ನಡೆಸಲಾಯಿತು. ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನೀಶನ್, 33ನೇ ವಾರ್ಡ್‍ನ ಪಾಲಿಯೇಟಿವ್ ರೋಗಿಗಳಿಗೆ ನೀಡುವ ಪರಿಕರಗಳನ್ನು ಸ್ವೀಕರಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸಭಾ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ನಗರಸಭೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಕರು ಭಾಗವಹಿಸಿದ್ದರು. ನಗರಸಭಾ ಪಾಲಿಯೇಟಿವ್ ದಾದಿ ದೀಪ್ತಿ ಸುನೀಲ್ ಕುಮಾರ್ ಸ್ವಾಗತಿಸಿದರು.